"

ಬೆಂಗಳೂರು : ಪ್ರತಿಭಟನೆಯ ಕಾವು ಹೆಚ್ಚಾಗುತ್ತಿರುವ ಮಧ್ಯೆ ಯೇ ಐಎಂಎ ಜ್ಯುವೆಲ್ಲರ್ಸ್‌ನಲ್ಲಿ ಕೆಲಸ ಮಾಡುತ್ತಿರುವ ಮೊಹಮ್ಮದ್ ಎಂಬಾತ, ‘ಮನ್ಸೂರ್ ಭಾಯ್ ಜಿಂದಾ ಹೈ’ ಎಂದು ಹೇಳುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ. ಕೂಡಲೇ ಆತನನ್ನು ವಶಕ್ಕೆ ಪಡೆದ ಪೊಲೀಸರು ಆತನಿಂದ ಕೆಲ ಮಾಹಿತಿ ಪಡೆದುಕೊಂಡರು.ಅನಂತರ ಧ್ವನಿವರ್ಧಕದ ಮೂಲಕ ಆತ, ‘ಮನ್ಸೂರ್ ಭಾಯ್ ಜಿಂದಾ ಹೈ. ಯಾರು ಹೆದರಬೇಕಿಲ್ಲ. ಪ್ರತಿಯೊಬ್ಬರ ಹಣ ಕೊಡು ತ್ತಾರೆ’ ಎಂದು ಹೇಳಿದ.  ಆದರೆ, ಮನ್ಸೂರ್ ಎಲ್ಲಿದ್ದಾರೆ ಎಂಬ ಬಗ್ಗೆ ಮಾಹಿತಿಯಿಲ್ಲ ಎಂದು ಹೇಳುವ ಮೂಲಕ ಪ್ರತಿಭಟನಾಕಾರರಲ್ಲಿ ಮತ್ತಷ್ಟು ಆಕ್ರೋಶ ಹೆಚ್ಚಿಸಿದ. ಬಳಿಕ ಆತನನ್ನು ಪೊಲೀಸರು ವಶಕ್ಕೆ ಪಡೆದರು.