ಬೆಂಗಳೂರು, (ಜೂನ್.11):  ಐಎಂಎ ಜ್ಯುವೆಲರಿ ಬಹುಕೋಟಿ ವಂಚನೆ ಪ್ರಕರಣದ ತನಿಖೆಯ ಜವಾಬ್ದಾರಿಯನ್ನು ಸಿಸಿಬಿಗೆ ವಹಿಸಿದ್ದ ರಾಜ್ಯ ಸರ್ಕಾರ ಇದೀಗ ಪ್ರಕರಣದ ವಿಚಾರಣೆಯನ್ನು ವಿಶೇಷ ತನಿಖಾ ತಂಡಕ್ಕೆ ವಹಿಸಿದೆ.

ಪತ್ನಿಯರೊಂದಿಗೆ ಮನ್ಸೂರ್ ಪರಾರಿ! ‘ಡೈರೆಕ್ಟರ್ ಖೆಡ್ಡಾ’ ತೋಡಿದ ಪೊಲೀಸರು

ಈ ಮೊದಲು ಐಎಂಎ ಬಹುಕೋಟಿ ವಂಚನೆ ಕೇಸ್‌ನ್ನು ಸಿಎಂ ಕುಮಾರಸ್ವಾಮಿ ಅವರು ಸಿಸಿಬಿಗೆ ವಹಿಸಲಾಗಿದೆ ಎಂದು ಟ್ವೀಟ್ ಮೂಲಕ ತಿಳಿಸಿದ್ದರು. 

ಆದರೆ, ಇದೀಗ ಸಿಎಂ ಒಂದು ಹೆಜ್ಜೆ ಮುಂದೆ ಹೋಗಿದ್ದು, ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ದಳ (ಎಸ್‌ಐಟಿ)ಕ್ಕೆ ವಹಿಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.