ಶಾಸಕರ ಬೆಂಬಲ ಹೊಂದಿರುವ ಶಶಿಕಲಾ ನಟರಾಜನ್‌ ಅವರಿಗೆ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಬೋಧಿಸುವುದು ರಾಜ್ಯಪಾಲ ವಿದ್ಯಾಸಾಗರ್‌ ರಾವ್‌ ಅವರ ಕರ್ತವ್ಯ ಎಂದು ಬಿಜೆಪಿ ಮುಖಂಡ ಸುಬ್ರಮಣಿಯನ್‌ ಸ್ವಾಮಿ ಹೇಳಿದ್ದಾರೆ.
ನವದೆಹಲಿ(ಫೆ.08): ಶಾಸಕರ ಬೆಂಬಲ ಹೊಂದಿರುವ ಶಶಿಕಲಾ ನಟರಾಜನ್ ಅವರಿಗೆ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಬೋಧಿಸುವುದು ರಾಜ್ಯಪಾಲ ವಿದ್ಯಾಸಾಗರ್ ರಾವ್ ಅವರ ಕರ್ತವ್ಯ ಎಂದು ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.
ತಮಿಳುನಾಡಿನಲ್ಲಿ ಈ ರೀತಿಯ ರಾಜಕೀಯ ಬಿಕ್ಕಟ್ಟು ಉಂಟಾಗಿರುವ ಸನ್ನಿವೇಶದಲ್ಲಿ ರಾಜ್ಯಪಾಲರು ಮಹಾರಾಷ್ಟ್ರದಲ್ಲಿ ಕುಳಿತುಕೊಳ್ಳುವುದು ಸರಿಯಲ್ಲ ಅಂತ ಸುಬ್ರಮಣಿ ಸ್ವಾಮಿ ಹೇಳಿದ್ದಾರೆ.
ಶಶಿಕಲಾ, ಜಯಲಲಿತಾ ಅವರ ಆಪ್ತರಾಗಿದ್ದರು. ಜಯಾ ಸಾವಿನ ಬಳಿಕವೂ ಕೆಲವು ಮುಖ್ಯ ನಿರ್ಧಾರಗಳನ್ನು ಕೈಗೊಂಡವರು. ಜಯಾ ಅವರನ್ನು ಸ್ನೇಹಿತೆ ಮತ್ತು ಶತ್ರುವಾಗಿ ಅನೇಕ ವರ್ಷಗಳಿಂದ ಬಲ್ಲೆ. ಪನೀರ್ ಸೆಲ್ವಂರನ್ನು ಜಯಲಲಿತಾ ರಬ್ಬರ್ ಸ್ಟಾಂಪ್ ಆಗಿ ಬಳಸುತ್ತಿದ್ದರು ಅಂತ ಸ್ವಾಮಿ ವಿವರಿಸಿದ್ದಾರೆ..
