ಹುಣಸಮಾರನಹಳ್ಳಿ ಸಂಸ್ಥಾನ ಮಠದ ಪೀಠಾಧ್ಯಕ್ಷ ಪರ್ವತರಾಜ ಶಿವಾಚಾರ್ಯ ಸ್ವಾಮಿ ಮಗ ದಯಾನಂದ ಅಲಿಯಾಸ್ ಪಟ್ಟದ ಗುರುನಂಜೇಶ್ವರ ಶಿವಾಚಾರ್ಯ ಸ್ವಾಮಿ ಕನ್ನಡದ ಚಿತ್ರನಟಿಯೊಂದಿಗೆ ರಾಸಲೀಲೆ ನಡೆಸಿದ್ದಾರೆ ಎನ್ನುವ ವಿಡಿಯೋಗೆ ಸಂಬಂಧಿಸಿದಂತೆ ಆ ನಟಿ ಸುವರ್ಣನ್ಯೂಸ್ ಜೊತೆ ಮಾತನಾಡಿದ್ದಾರೆ.
ಬೆಂಗಳೂರು (ಅ.26): ಹುಣಸಮಾರನಹಳ್ಳಿ ಸಂಸ್ಥಾನ ಮಠದ ಪೀಠಾಧ್ಯಕ್ಷ ಪರ್ವತರಾಜ ಶಿವಾಚಾರ್ಯ ಸ್ವಾಮಿ ಮಗ ದಯಾನಂದ ಅಲಿಯಾಸ್ ಪಟ್ಟದ ಗುರುನಂಜೇಶ್ವರ ಶಿವಾಚಾರ್ಯ ಸ್ವಾಮಿ ಕನ್ನಡದ ಚಿತ್ರನಟಿಯೊಂದಿಗೆ ರಾಸಲೀಲೆ ನಡೆಸಿದ್ದಾರೆ ಎನ್ನುವ ವಿಡಿಯೋಗೆ ಸಂಬಂಧಿಸಿದಂತೆ ಆ ನಟಿ ಸುವರ್ಣನ್ಯೂಸ್ ಜೊತೆ ಮಾತನಾಡಿದ್ದಾರೆ.
"ಈ ವಿಡಿಯೋದಲ್ಲಿರುವ ಯುವತಿ ನಾನಲ್ಲ. ನನಗೂ, ಸ್ವಾಮೀಜಿ ಜೊತೆಗಿನ ಸಿಡಿಗೂ ಸಂಬಂಧ ಇಲ್ಲ. ಯಾರೋ ಬೇಕಂತಲೇ ಈ ರೀತಿ ಮಾಡಿದ್ದಾರೆ. ದಯಾನಂದ ಸ್ವಾಮೀಜಿ ಯಾರೋ ನನಗೆ ಗೊತ್ತಿಲ್ಲ. ನನಗೂ ಮತ್ತು ಸ್ವಾಮೀಜಿಗೆ ಯಾವುದೇ ಸಂಬಂಧ ಇಲ್ಲ. ವಿಡಿಯೋದಲ್ಲಿ ಮಾರ್ಫಿಂಗ್ ಮಾಡಿರಬಹುದು. ನನ್ನ ಹೆಸರನ್ನು ಅನಗತ್ಯವಾಗಿ ಪ್ರಸ್ತಾಪಿಸಲಾಗುತ್ತಿದೆ" ಎಂದು ವಿವಾದಿತ ನಟಿ ಸುವರ್ಣನ್ಯೂಸ್ಗೆ ಹೇಳಿಕೆ ನೀಡಿದ್ದಾರೆ.
