ಚೆನ್ನೈ(ನ.07): ಖ್ಯಾತ ನಟ, ನಿರ್ದೇಶಕ ಮತ್ತು ನಿರ್ಮಾಪಕ ಕಮಲ್ ಹಾಸನ್ ಮತ್ತು ಗೌತಮಿ ವಿಚ್ಚೇದನಕ್ಕೆ ಕಮಲ್ ಮಗಳು ಶೃತಿ ಕಾರಣವೆಂಬ ಸುದ್ದಿ ಹರಡಿತ್ತು. ಆದರೆ ಇದಕ್ಕೆ ಶೃತಿ ಪ್ರತಿಕ್ರಿಯೆ ನೀಡಿದ್ದಾರೆ. 

ತಂದೆ ವಿಚ್ಚೇದನಕ್ಕೆ ತಾನು ಕಾರಣ ಎನ್ನುವ ಸುದ್ದಿಯನ್ನು ಅಲ್ಲಗೆಳೆದ ಶೃತಿ ಈವರೆಗೂ ಯಾರ ವಿಚಾರದಲ್ಲೂ ತಾನೂ ಮೂಗು ತೂರ್ಸಿಲ್ಲ. ತನ್ನಪ್ಪ ಗೌತಮಿಯೊಂದಿಗೆ ಬೇರೆಯಾಗುವುದಕ್ಕೆ ತಾನು ಕಾರಣವಲ್ಲ ಎಂದಿದ್ದಾರೆ. 

ಕಮಲ್ ಹಾಸನ್ ಮತ್ತು ಗೌತಮಿ  ಅವರ  ವೈಯಕ್ತಿಕ ಕಾರಣಗಳಿಂದ ದೂರವಾಗಿರಬಹುದೆಂದು ಹೇಳಿದ್ದಾರೆ. ಇದಕ್ಕೆ ನಾನು ಕಾರಣವೂ ಅಲ್ಲ, ನನಗೆ ಅದು ಬೇಕಾಗಿಯೂ ಇಲ್ಲ ಎಂದು ತಿಳಿಸಿದ್ದಾರೆ.