ಬೆಂಗಳೂರು : [ಜು.27]: ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಏರಿದ್ದು, ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾರೆ. 5 ವರ್ಷಗಳ ಕಾಲ ಸುಭದ್ರವಾಗಿ ಯಡಿಯೂರಪ್ಪ ನೇತೃತ್ವದ ಸರ್ಕಾರ ಆಡಳಿತ ನಡೆಸಲಿದೆ ಎಂದು ಬಿಜೆಪಿ ಸೊರಬ ಕ್ಷೇತ್ರದ ಶಾಸಕ ಕುಮಾರ್ ಬಂಗಾರಪ್ಪ ಹೇಳಿದರು. 

 ಸರ್ಕಾರಕ್ಕೆ ಕೆಲವು ತಾಂತ್ರಿಕ ಸಮಸ್ಯೆಗಳಿದ್ದು, ಅವೆಲ್ಲವೂ ಕೂಡ ಆದಷ್ಟು ಶೀಘ್ರ ಬಗೆಹರಿಯಲಿದೆ. ಯಾವುದೇ ಸಮಸ್ಯೆ ಇಲ್ಲದೇ ಸರ್ಕಾರ ಅವಧಿ ಪೂರ್ಣಗೊಳಿಸಲಿದೆ ಎಂದು ರಾಮನಗರದಲ್ಲಿ ಕುಮಾರ್ ಬಂಗಾರಪ್ಪ ಹೇಳಿದರು. 

ಮನೆದೇವರ ದರ್ಶನವಿಲ್ಲದೆ ಯಡಿಯೂರಪ್ಪ ಪ್ರಮಾಣ!

ಇನ್ನು ಬಿಎಸ್ ವೈ ಸಂಪುಟ ಸೇರ್ಪಡೆ ಬಗ್ಗೆ ಪ್ರತಿಕ್ರಿಯಿಸಿದ ಕುಮಾರ್ ಬಂಗಾರಪ್ಪ,  ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ನಮ್ಮ ತಂದೆಯವರು ರಾಜ್ಯದ  ಸಿಎಂ ಆಗಿದ್ದರು. ಈಗ ಯಡಿಯೂರಪ್ಪನವರೇ ನಮ್ಮ ಜಿಲ್ಲೆಯಿಂದ ಸಿಎಂ ಆಗಿದ್ದು, ಹಾಗಾಗಿ ನಾನು ಸಚಿವ ಸ್ಥಾನಕ್ಕೆ ಒತ್ತಾಯಿಸುವುದಿಲ್ಲ ಎಂದರು. 

ಬಿಎಸ್‌ವೈ ಮತ್ತೆ ಸಿಎಂ: ಪಟಾಕಿ ಸಿಡಿಸಿ ಬಿಜೆಪಿ ಕಾರ್ಯಕರ್ತರ ಸಂಭ್ರಮ

ಬಿಜೆಪಿ - ಜೆಡಿಎಸ್ ಮತ್ತೆ ಮೈತ್ರಿಯಾಗುವ ವಿಚಾರದ ಬಗ್ಗೆಯೂ ಪ್ರತಿಕ್ರಿಯಿಸಿದ ಕುಮಾರ್ ಬಂಗಾರಪ್ಪ ಇದೆಲ್ಲವೂ ಕೂಡ ಸತ್ಯಕ್ಕೆ ದೂರವಾದ ಸಂಗತಿ. ಅಂತಹ ಯಾವುದೇ ಬೆಳವಣಿಗೆಗಳು ನಡೆದಿಲ್ಲ ಎಂದರು.