ನಾನು ಹಿಂದುತ್ವದ ವಿರೋಧಿಯಲ್ಲ: ಪ್ರಕಾಶ್ ರೈ

im not Anti-Hindu says Prakash Rai
Highlights

ನಾನು ಕೆಟ್ಟ ನಟನಲ್ಲ.  ಆದರೂ ಯಾವುದೇ ಬಾಲಿವುಡ್ ಚಿತ್ರಗಳ ಆಫರ್ ಬರುತ್ತಿಲ್ಲ. ನನ್ನ ಚಿತ್ರಗಳು ಚೆನ್ನಾಗಿಯೇ ನಡೆಯುತ್ತಿವೆ. ಇದುವರೆಗೆ ನಿರ್ದೇಶಕರ ಯಾವುದೇ ಫೋನ್ ಕರೆ ಬಂದಿಲ್ಲ ಎಂದು ಪ್ರಕಾಶ್ ರೈ ಹೇಳಿದ್ದಾರೆ. 

ಹುಬ್ಬಳ್ಳಿ (ಮೇ. 06): ನಾನು ಕೆಟ್ಟ ನಟನಲ್ಲ.  ಆದರೂ ಯಾವುದೇ ಬಾಲಿವುಡ್ ಚಿತ್ರಗಳ ಆಫರ್ ಬರುತ್ತಿಲ್ಲ. ನನ್ನ ಚಿತ್ರಗಳು ಚೆನ್ನಾಗಿಯೇ ನಡೆಯುತ್ತಿವೆ. ಇದುವರೆಗೆ ನಿರ್ದೇಶಕರ ಯಾವುದೇ ಫೋನ್ ಕರೆ ಬಂದಿಲ್ಲ ಎಂದು ಪ್ರಕಾಶ್ ರೈ ಹೇಳಿದ್ದಾರೆ. 

ಬಿಜೆಪಿಯಿಂದ ಈ ವಿಷಯದಲ್ಲಿಯೂ ಭಯದ ವಾತಾವರಣ ಸೃಷ್ಟಿಸಲಾಗಿದೆ. ಜನರು ದೇಶದಲ್ಲಿ ಭಯದ ಪರಿಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಜಸ್ಟ್ ಆಸ್ಕಿಂಗ್ ಪ್ರಶ್ನೆಗಳನ್ನು ಮಾತ್ರ ಕೇಳಲ್ಲ, ಚರ್ಚಾಕೂಟ ಏರ್ಪಡಿಸುತ್ತೇವೆ. ಚುನಾವಣೆ ನಂತರವೂ ನಿರಂತರ ಹೋರಾಟ ಮುಂದುವರಿಯುತ್ತೆ. ನಾನು ಹಿಂದುತ್ವದ ವಿರೋಧಿಯಲ್ಲ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬಾರದು.

ಕಾಂಗ್ರೆಸ್, ಜೆಡಿಎಸ್‌ನಲ್ಲಿ ಯಾವುದನ್ನಾದರೂ ಜನರು ಆಯ್ಕೆ ಮಾಡಿಕೊಳ್ಳಲಿ. ಯಾವುದೇ ಸರ್ಕಾರ ಬಂದರೂ ನಾನು ಪ್ರಶ್ನೆ ಕೇಳುತ್ತೇನೆ ಎಂದು ಪ್ರಕಾಶ್ ರೈ ಹೇಳಿದ್ದಾರೆ. 
 

loader