ಕೊಲ್ಲುವವರು ಎಷ್ಟೇ ಗಟ್ಟಿಯಾಗಿದ್ದರೂ ಎಲ್ಲರ ತಲೆಗಳನ್ನು ಕತ್ತರಿಸಲಾಗದು ಮತ್ತು ಎಲ್ಲರೂ ತಲೆಗಳನ್ನು ಬಾಗಿಸಲಾರರು ಎಂದು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ ವಿದ್ಯಾರ್ಥಿ ಮುಖಂಡ ಕನ್ಹಯ್ಯ ಕುಮಾರ್ ತಿಳಿಸಿದರು.
ಬೆಂಗಳೂರು (ಅ.30): ಕೊಲ್ಲುವವರು ಎಷ್ಟೇ ಗಟ್ಟಿಯಾಗಿದ್ದರೂ ಎಲ್ಲರ ತಲೆಗಳನ್ನು ಕತ್ತರಿಸಲಾಗದು ಮತ್ತು ಎಲ್ಲರೂ ತಲೆಗಳನ್ನು ಬಾಗಿಸಲಾರರು ಎಂದು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ ವಿದ್ಯಾರ್ಥಿ ಮುಖಂಡ ಕನ್ಹಯ್ಯ ಕುಮಾರ್ ತಿಳಿಸಿದರು.
ಬೆಂಗಳೂರು ಸಾಹಿತ್ಯ ಉತ್ಸವದಲ್ಲಿ ಸಾಹಿತ್ಯ ಉತ್ಸವದಲ್ಲಿ ಲೇಖಕ ಚಂದನಗೌಡ ಅವರ `ದ ವೇ ಐ ಸೀ ಇಟ್-ಗೌರಿ ಲಂಕೇಶ್ ರೀಡರ್' ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿ, ದಾಬೋಲ್ಕರ್, ಪನ್ಸಾರೆ ಮತ್ತು ಸಂಶೋಧಕ ಎಂ.ಎಂ.ಕಲ್ಬುರ್ಗಿ ಮತ್ತು ಗೌರಿ ಲಂಕೇಶ್ ಅವರಿಂದ ಯಾರಿಗೆ ತೊಂದರೆ ಆಗಿತ್ತು. ಇವರ ಬರಹಗಳು ಮತ್ತು ಇವರು ಎತ್ತಿದ್ದ ಪ್ರಶ್ನೆಗಳಿಗೆ ಹೆದರಿ ಕೊಲೆ ಮಾಡಲಾಗಿದೆ. ನಾನು ತಾಯಿಯಂತೆ ನೋಡಿಕೊಂಡಿದ್ದ ಗೌರಿ ಲಂಕೇಶ್ ಅವರು ಯಾವಾಗಲೂ `ಹೆದರಬೇಡ' ಎಂದು ಧೈರ್ಯ ತುಂಬುತ್ತಿದ್ದರು. ಹೀಗಾಗಿ ಅವರ ಆಶಯ ಮತ್ತು ಆದರ್ಶವನ್ನು ಮುನ್ನಡೆಸುತ್ತೇನೆ ಎಂದರು.
`ಗೌರಿ ಮಾಕ್ಸವಾದದ ನಿಷ್ಠುರ ವಿಮರ್ಶಕಿಯಾಗಿದ್ದರಿಂದ ಹಲವು ಬಾರಿ ಚರ್ಚಿಸಿದ್ದೇನೆ. ಅವರು ಮಾಕ್ಸವಾದಿಗಿಂತ ಹೆಚ್ಚಾಗಿ ಅಂಬೇಡ್ಕರ್’ವಾದಿಯಾಗಿದ್ದರು. ಈ ಕಾರಣಕ್ಕೇ ನಾನು ಮತ್ತು ಜಿಗ್ನೇಶ್ ಮೇವಾನಿ ಅವರ ಪಕ್ಕ ನಿಲ್ಲಲು ಸಾಧ್ಯವಾಯಿತು' ಎಂದರು.
ಸಿಂಗ್-ಮುಷರ ಸೂತ್ರವೇ ಮಾರ್ಗ: ಭಾರತ-ಪಾಕಿಸ್ತಾನ ನಡುವೆ ಉಂಟಾಗಿರುವ ಬಿಕ್ಕಟ್ಟು ನಿವಾರಣೆಗೆ ಎರಡೂ ದೇಶಗಳ ಮಾಜಿ ಪ್ರಧಾನಿಗಳಾದ ಮನಮೋಹನ್ ಸಿಂಗ್ ಮತ್ತು ಮುಷ್ರಫ್ ಸೂತ್ರವೇ ಮಾರ್ಗವೆಂದು ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಕವಲ್ ದವರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
