Asianet Suvarna News Asianet Suvarna News

ನಾನೂ ಕೂಡ ನೂರರಷ್ಟು ಪ್ರಾಮಾಣಿಕನಾಗಿರಲು ಸಾಧ್ಯವಿಲ್ಲ : ಸಿಎಂ

ನೂರಕ್ಕೆ ನೂರು ಪ್ರಾಮಾಣಿಕವಾಗಿದ್ದರೆ ರಾಜಕಾರಣದಲ್ಲಿ ಇರಲು ಸಾಧ್ಯವಿಲ್ಲ. ನಾನು ಕೂಡ ನೂರಕ್ಕೆ ನೂರು ಪ್ರಾಮಾಣಿಕನಾಗಿ ಕೆಲಸ ಮಾಡಲು ಸಾಧ್ಯ ವಿಲ್ಲ. ರಾಜಕಾರಣ ಮಾಡ ಬೇಕಾದರೆ ಕೆಲ ವಿಷಯ ಗಳಲ್ಲಿ ರಾಜಿ ಮಾಡಿಕೊಳ್ಳಲೇಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

Im Also Not 100 Percent Honest Says Siddaramaiah

ಬೆಂಗಳೂರು: ನೂರಕ್ಕೆ ನೂರು ಪ್ರಾಮಾಣಿಕವಾಗಿದ್ದರೆ ರಾಜಕಾರಣದಲ್ಲಿ ಇರಲು ಸಾಧ್ಯವಿಲ್ಲ. ನಾನು ಕೂಡ ನೂರಕ್ಕೆ ನೂರು ಪ್ರಾಮಾಣಿಕನಾಗಿ ಕೆಲಸ ಮಾಡಲು ಸಾಧ್ಯ ವಿಲ್ಲ. ರಾಜಕಾರಣ ಮಾಡ ಬೇಕಾದರೆ ಕೆಲ ವಿಷಯ ಗಳಲ್ಲಿ ರಾಜಿ ಮಾಡಿಕೊಳ್ಳಲೇಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

ಎ.ಕೆ. ಸುಬ್ಬಯ್ಯ ಅಭಿನಂದನಾ ಸಮಿತಿ ಮಂಗಳವಾರ ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿದ್ದ ಎ.ಕೆ. ಸುಬ್ಬಯ್ಯ ಅವರ ಅಭಿನಂದನಾ ಸಮಾರಂಭದಲ್ಲಿ ‘ದಾರಿದೀಪ’ ಎಂಬ ಅಭಿನಂದನಾ ಗ್ರಂಥ ಬಿಡುಗೊಳಿಸಿದರು. ರಾಜಕಾರಣದಲ್ಲಿ ನೂರಕ್ಕೆ ನೂರರಷ್ಟು ಪ್ರಾಮಾಣಿಕ ರಾಗಿರುವುದು ಬಹಳ ಕಷ್ಟ.

ಮಾಧ್ಯಮಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಪ್ರಾಮಾಣಿಕರಾಗಿರಲು ಸಾಧ್ಯವಿಲ್ಲ ಎನ್ನುತ್ತಾರೆ ಎಂದು ಟೀಕಿಸಬಹುದು. ಆದರೆ, ಇಂದಿನ ವ್ಯವಸ್ಥೆಯ ವಸ್ತು ಸ್ಥಿತಿ ಇರುವುದೇ ಹಾಗೆ. ಇಂದಿನ ವ್ಯವಸ್ಥೆಯಲ್ಲಿ ರಾಜಕಾರಣದಲ್ಲಿ ಇರಬೇಕಾದರೆ ಕೆಲವು ವಿಷಯಗಳಲ್ಲಿ ರಾಜಿ ಮಾಡಿ ಕೊಳ್ಳಲೇಬೇಕು.

ಆದರೆ, ನಾವು ಪ್ರತಿಪಾದಿಸುವ ಸಿದ್ಧಾಂತ, ವಿಚಾರಧಾರೆ ಗಳಲ್ಲಿ ರಾಜಿ ಮಾಡಿಕೊಳ್ಳದೆಯೂ ಇವತ್ತಿನ ಪರಿಸ್ಥಿತಿಯಲ್ಲೂ ರಾಜಕಾರಣ ಮಾಡಬಹುದು. ಆದರೂ ನೂರಕ್ಕೆ ನೂರರಷ್ಟು ಪ್ರಾಮಾಣಿಕವಾಗಿ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು. ಈ ಚುನಾವಣೆ ವ್ಯವಸ್ಥೆ ಬಹಳ ಕಷ್ಟ. ಚುನಾವಣೆಗೆ ನಿಂತ ಮೇಲೆ ಗೆಲ್ಲಬೇಕು. ನಿಂತ ಮೇಲೆ ಹಿಂದೆ ಸರಿಯಲು ಸಾಧ್ಯವಿಲ್ಲ. ಏಕೆಂದರೆ, ಈ ವ್ಯವಸ್ಥೆ ಸಮಾಜಘಾತುಕರ ಹಾಗೂ ದುಷ್ಟರ ಕೈಗೆ ಸಿಗುವುದನ್ನು ತಪ್ಪಿಸಲು ಚುನಾವಣೆಗೆ ನಿಲ್ಲಬೇಕು.

ಅದಕ್ಕಾಗಿ ಒಂದಷ್ಟು ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ ಎಂದರು. ಎ.ಕೆ. ಸುಬ್ಬಯ್ಯ ಅವರ ಸಮಗ್ರ ಬರಹಗಳ ಗ್ರಂಥ ‘ಸೌಹಾರ್ದ ಸೆಲೆ’ ಬಿಡುಗಡೆಗೊಳಿಸಿದ ಸಾಹಿತಿ ದೇವನೂರ ಮಹಾದೇವ, ಎ.ಕೆ. ಸುಬ್ಬಯ್ಯ, ಸಚಿವರಾದ ಕೆ.ಜೆ. ಜಾರ್ಜ್, ಕೆ.ಆರ್. ರಮೇಶ್‌ಕುಮಾರ್, ಮಾಜಿ ಸಚಿವ ಎಂ.ಸಿ. ನಾಣಯ್ಯ, ರೈತ ನಾಯಕಿ ಚುಕ್ಕಿ ನಂಜುಂಡಸ್ವಾಮಿ, ಸುಬ್ಬಯ್ಯ ಅಭಿನಂದನಾ ಸಮಿತಿ ಅಧ್ಯಕ್ಷ ಪ್ರೊ. ರವಿವರ್ಮ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Follow Us:
Download App:
  • android
  • ios