ಐಕ್ಯತಾ ಸಮಾವೇಶದಲ್ಲಿ ಮೋದಿ ವಿರುದ್ಧ ಸಿಎಂ ವಾಗ್ದಾಳಿ ನಡೆಸಿದ್ದಾರೆ.  ಭಾಷಣದಲ್ಲಿ ತಮ್ಮನ್ನು ತಾವೇ ಪರಿಚಯ ಮಾಡಿಕೊಂಡಿದ್ದಾರೆ.  ನನ್ನ ಹೆಸರು ಸಿದ್ದರಾಮಯ್ಯ.  ನಮ್ಮ ಮನೆ ದೇವರು ಸಿದ್ದರಾಮೇಶ್ವರ.  ನಾವು ಕೂಡ ನಮ್ಮ ಊರಲ್ಲಿ ರಾಮಮಂದಿರ ಕಟ್ಟಿಕೊಂಡಿದ್ದೇವೆ.  ನಾವೇನು ಹಿಂದೂಗಳೇ ಅಲ್ವಾ? ನಾನು ಕೂಡ ಹಿಂದೂನೇ.  ಬಿಜೆಪಿಯವರೇನು  ಹಿಂದೂ ಧರ್ಮ ಗುತ್ತಿಗೆ ತಗೆದುಕೊಂಡಿದ್ದಾರಾ?  ನಾನು ಹಿಂದೂಗಳನ್ನ ಪ್ರೀತಿಸುವಷ್ಟೇ ಅಲ್ಪಸಂಖ್ಯಾತರನ್ನು ಪ್ರೀತಿಸುತ್ತೇನೆ ಎಂದು ಬಿಜೆಪಿ ನಾಯಕರಿಗೆ  ಸಿಎಂ ಸಿದ್ದರಾಮಯ್ಯ ಚಾಟಿ ಬೀಸಿದ್ದಾರೆ.

ಮೈಸೂರು (ನ.30): ಐಕ್ಯತಾ ಸಮಾವೇಶದಲ್ಲಿ ಮೋದಿ ವಿರುದ್ಧ ಸಿಎಂ ವಾಗ್ದಾಳಿ ನಡೆಸಿದ್ದಾರೆ. ಭಾಷಣದಲ್ಲಿ ತಮ್ಮನ್ನು ತಾವೇ ಪರಿಚಯ ಮಾಡಿಕೊಂಡಿದ್ದಾರೆ. ನನ್ನ ಹೆಸರು ಸಿದ್ದರಾಮಯ್ಯ. ನಮ್ಮ ಮನೆ ದೇವರು ಸಿದ್ದರಾಮೇಶ್ವರ. ನಾವು ಕೂಡ ನಮ್ಮ ಊರಲ್ಲಿ ರಾಮಮಂದಿರ ಕಟ್ಟಿಕೊಂಡಿದ್ದೇವೆ. ನಾವೇನು ಹಿಂದೂಗಳೇ ಅಲ್ವಾ? ನಾನು ಕೂಡ ಹಿಂದೂನೇ. ಬಿಜೆಪಿಯವರೇನು ಹಿಂದೂ ಧರ್ಮ ಗುತ್ತಿಗೆ ತಗೆದುಕೊಂಡಿದ್ದಾರಾ? ನಾನು ಹಿಂದೂಗಳನ್ನ ಪ್ರೀತಿಸುವಷ್ಟೇ ಅಲ್ಪಸಂಖ್ಯಾತರನ್ನು ಪ್ರೀತಿಸುತ್ತೇನೆ ಎಂದು ಬಿಜೆಪಿ ನಾಯಕರಿಗೆ ಸಿಎಂ ಸಿದ್ದರಾಮಯ್ಯ ಚಾಟಿ ಬೀಸಿದ್ದಾರೆ.

ಸಬ್ ಕ್ ಸಾಥ್ ಸಬ್ ಕ್ ವಿಕಾಸ್ ಕುರಿತು ಸಿಎಂ ವ್ಯಂಗ್ಯವಾಡಿದ್ದಾರೆ. ಅಲ್ಪಸಂಖ್ಯಾತರನ್ನು ಕೈಬಿಟ್ಟು ನೀವು ಎಂಥಾ ವಿಕಾಸ್ ಮಾಡ್ತೀರಾ ? ಬಿಜೆಪಿ ನಾಯಕರಿಗೆ ಸಂವಿಧಾನದಲ್ಲಿ ನಂಬಿಕೆಯಿಲ್ಲ. ಈ ಕಾರಣಕ್ಕಾಗಿ ಈ ದೇಶವನ್ನು ಆಳ್ವಿಕೆ ಮಾಡುವ ಅರ್ಹತೆ ಇವರಿಗಿಲ್ಲ ಎಂದು ಮೈಸೂರಿನಲ್ಲಿ ಮೋದಿ ಮತ್ತು ಯಡ್ಡಿ ವಿರುದ್ದ ಸಿಎಂ ತೀವ್ರ ವಾಗ್ದಾಳಿ ನಡೆಸಿದರು.