ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರು ತಾವೂ ಕೂಡ ಮೂಲತಃ ಕಾಂಗ್ರೆಸಿಗ ಎಂದು ಹೇಳಿಕೊಂಡಿದ್ದಾರೆ. ಇಂದಿರಾ ಗಾಂಧಿ ಅವಧಿಯಲ್ಲಿ ಪಕ್ಷ ಇಬ್ಭಾಗವಾದಾಗ ತಾವು ಬಂಡಾಯ ಕಾಂಗ್ರೆಸಿಗರಾಗಿ ಹೊರ ಹೊಮ್ಮಿದ್ದಾಗಿ ಹೇಳಿದ್ದಾರೆ.

ಬೆಂಗಳೂರು : ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ತೆಗೆದುಕೊಂಡ ಕೆಲವು ಜನಪ್ರಿಯ ಕಾರ್ಯಕ್ರಮಗಳನ್ನು ವಿರೋಧಿಸಿ ಕೆಲವರು ಹೊರಬಂದರು. 

ಆಗ ಪಕ್ಷ ಇಬ್ಭಾಗವಾಯಿತು. ಇದು ನನ್ನನ್ನು ಬಂಡಾಯ ಕಾಂಗ್ರೆಸ್ಸಿಗನಾಗಿ ಮಾಡಿತು. ನಂತರದ ದಿನಗಳಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಆದ ಸೋಲು ನನ್ನನ್ನು ಲೋಕಸಭೆಗೆ ಹೋಗುವಂತೆ ಮಾಡಿತು ಎಂದರು.

ವಿಧಾನಪರಿಷತ್ತಿನ ಮಾಜಿ ಸಭಾಪತಿ ಬಿ.ಎಲ್‌.ಶಂಕರ್‌ ಹಾಗೂ ಪ್ರೊ.ವಲೇರಿಯನ್‌ ರೊಡ್ರಿಗನ್‌ ಅವರು ಇಂಗ್ಲಿಷ್‌ನಲ್ಲಿ ಹೊರತಂದಿದ್ದ ‘ಇಂಡಿಯನ್‌ ಪಾರ್ಲಿಮೆಂಟ್‌’ ಪುಸ್ತಕವನ್ನು ಪ್ರೊ.ಜೆ.ಎಸ್‌.ಸದಾನಂದ ಅವರು ಕನ್ನಡಕ್ಕೆ ಅನುವಾದಿಸಿ ಅಂಕಿತ ಪ್ರಕಾಶನ ಮುದ್ರಿಸಿರುವ ‘ಭಾರತದ ಸಂಸತ್ತು- ಒಂದು ಕಾರ್ಯನಿರತ ಪ್ರಜಾಪ್ರಭುತ್ವ’ ಪುಸ್ತಕವನ್ನು ಭಾನುವಾರ ಬಿಡುಗಡೆ ಮಾಡಿ ಅವರು ಮಾತನಾಡುತ್ತಾ ಈ ವಿಚಾರ ಹೇಳಿದರು.