ಚಿಕ್ಕಮಗಳೂರು: ಬಿಜೆಪಿ ರಾಜ್ಯಾಧ್ಯಕ್ಷರ ಹುದ್ದೆಯ ಬಗ್ಗೆ ಕೇಳಿದಾಗ, ಅದು, ಅಧಿಕಾರದ ಹುದ್ದೆ ಅಲ್ಲ, ಜವಾಬ್ದಾರಿ. ಈ ಬಗ್ಗೆ ಪಕ್ಷದ ಹಿರಿಯ ಮುಖಂಡರು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಶಾಸಕ ಸಿ.ಟಿ.ರವಿ ಹೇಳಿದ್ದಾರೆ. 

ಅರ್ಹತೆ ಇದ್ದರೆ ಪಕ್ಷದ ಕಾರ್ಯಕರ್ತನಿಗೆ ಈ ಹುದ್ದೆ ಸಿಗಬಹುದು. ಇದಕ್ಕೆ ಮೀಸಲಾತಿ ಇಲ್ಲ, ಮೆರಿಟ್ ಇದೆ. ಈ ಹುದ್ದೆ ಯಾರಿಗೆ ಕೊಟ್ಟರೂ ಸಂತೋಷ. ಪಕ್ಷ ಬಯಸಿ ಕೊಟ್ಟಿದನ್ನು ಸ್ವೀಕಾರ ಮಾಡಿದ್ದೇನೆ ಎಂದರು. ಶುಕ್ರವಾರ ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಪಕ್ಷ ಬಯಸಿದರೆ ರಾಜ್ಯಾಧ್ಯಕ್ಷ ಹುದ್ದೆ ನಿಭಾಯಿಸುತ್ತೇನೆ ಎಂದರು. 

ಮೈತ್ರಿ ಸರ್ಕಾರ ಹೆಚ್ಚು ದಿನ ಉಳಿಯಲ್ಲ: ಲೋಕಸಭಾ ಚುನಾವಣಾ ಫಲಿತಾಂಶ ಬಳಿಕ ಮೈತ್ರಿ ಪಕ್ಷಗಳ ಆಂತರಿಕ ಸಂಘರ್ಷ ತಡೆಯಲು ಆಗುವುದಿಲ್ಲ. ಆ ಕಾರಣಕ್ಕಾಗಿ ಈ ಸರ್ಕಾರ ಹೆಚ್ಚು ದಿನ ಉಳಿಯುವುದಿಲ್ಲ. ಈಗಾಗಲೇ ಜಿ.ಟಿ. ದೇವೇಗೌಡ, ರಮೇಶ್ ಜಾರಕಿಹೊಳಿ,
ಕೋಲಾರದಲ್ಲಿ ಮುನಿಯಪ್ಪ ಬೆಂಬಲಿಗರು, ತಮ್ಮ ಮಿತ್ರ ಪಕ್ಷಗಳ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ ಎಂದು ಹೇಳಿದರು.