ಬೆಂಗಳೂರು(ಸೆ. 06): ಉದ್ಯಾನನಗರಿಯಲ್ಲಿರುವ ಪ್ರತಿಷ್ಠಿತ ಇಂಡಿಯನ್ ಇನ್ಸ್'ಟಿಟ್ಯೂಟ್ ಆಫ್ ಸೈನ್ಸ್(ಐಐಎಸ್'ಸಿ) ಭಾರತದ ಅತ್ಯುತ್ತಮ ಯೂನಿವರ್ಸಿಟಿ ಎಂಬ ಗರಿಮೆಯನ್ನು ಉಳಿಸಿಕೊಂಡಿದೆ. 2016-17ನೇ ಸಾಲಿನ ಕ್ಯೂಎಸ್ ವರ್ಲ್ಡ್ ಯೂನಿವರ್ಸಿಟಿ ರ್ಯಾಂಕಿಂಗ್ ಪಟ್ಟಿಯಲ್ಲಿ 5 ಸ್ಥಾನ ಕೆಳಗಿಳಿದಿರುವ ಐಐಎಸ್'ಸಿ 152ನೇ ಸ್ಥಾನದಲ್ಲಿದೆ. ಅಮೆರಿಕದ ಮಸ್ಸಾಚುಸೆಟ್ಸ್ ಇನ್ಸ್'ಟಿಟ್ಯೂಟ್ ಆಫ್ ಟೆಕ್ನಾಲಜಿ ವಿಶ್ವದ ನಂಬರ್ ಒನ್ ವಿಶ್ವವಿದ್ಯಾಲಯವೆಂಬ ಹಿರಿಮೆಗೆ ಪಾತ್ರವಾಗಿದೆ. ಇನ್ನು, ಭಾರತದ ಮಟ್ಟಿಗೆ ಐಐಎಸ್'ಸಿ ನಂತರ ಟಾಪ್ 6 ಸ್ಥಾನಗಳು ಐಐಟಿಗಳಿಗೆ ಹೋಗಿವೆ.
ವಿಶ್ವದ ಟಾಪ್ 10 ವಿವಿಗಳು:
1) ಮಸಾಶುಸೆಟ್ಸ್ ಇನ್ಸ್'ಟಿಟ್ಯೂಟ್ ಆಫ್ ಟೆಕ್ನಾಲಜಿ
2) ಸ್ಟಾನ್'ಫೋರ್ಡ್ ಯೂನಿವರ್ಸಿಟಿ
3) ಹಾರ್ವರ್ಡ್ ಯೂನಿವರ್ಸಿಟಿ
4) ಕೇಂಬ್ರಿಜ್ ಯೂನಿವರ್ಸಿಟಿ
5) ಕ್ಯಾಲಿಫೋರ್ನಿಯಾ ಇನ್ಸ್'ಟಿಟ್ಯೂಟ್ ಆಫ್ ಟೆಕ್ನಾಲಜಿ
6) ಆಕ್ಸ್'ಫರ್ಡ್ ಯೂನಿವರ್ಸಿಟಿ
7) ಯೂನಿವರ್ಸಿಟಿ ಕಾಲೇಜ್ ಆಫ್ ಲಂಡನ್
8) ಇಟಿಎಚ್ ಝುರಿಚ್
9) ಇಂಪೀರಿಯಲ್ ಕಾಲೇಜ್, ಲಂಡನ್
10) ಯೂನಿವರ್ಸಿಟಿ ಆಫ್ ಚಿಕಾಗೋ
ಭಾರತದ ಟಾಪ್ ಯೂನಿವರ್ಸಿಟಿಗಳು ಹಾಗೂ ವಿಶ್ವ ಶ್ರೇಯಾಂಕ:
1) ಇಂಡಿಯನ್ ಇನ್ಸ್'ಟಿಟ್ಯೂಟ್ ಆಫ್ ಸೈನ್ಸ್, ಬೆಂಗಳೂರು (152)
2) ಐಐಟಿ, ದೆಹಲಿ (185)
3) ಐಐಟಿ, ಮುಂಬೈ (219)
4) ಐಐಟಿ, ಮದ್ರಾಸ್ (249)
5) ಐಐಟಿ, ಕಾನ್'ಪುರ್ (302)
6) ಐಐಟಿ, ಖರಗ್'ಪುರ್ (313)
7) ಐಐಟಿ, ರೂರ್ಕೀ (399)
