Asianet Suvarna News Asianet Suvarna News

ಭಾರತದ ಟಾಪ್ ವಿವಿಗಳ ಪಟ್ಟಿಯಲ್ಲಿ ಬೆಂಗಳೂರಿನ 2 ವಿಶ್ವವಿದ್ಯಾಲಯಗಳು

ಭಾರತದ ಟಾಪ್ ವಿವಿ ಸ್ಥಾನವನ್ನು ಬೆಂಗಳೂರಿನ ಐಐಎಸ್‌ಸಿ ಕಾಯ್ದುಕೊಂಡಿದೆ. 2019 ರ ವಿಶ್ವ ವಿವಿ  ರ್ಯಾಕಿಂಗ್ ಪಟ್ಟಿಯಲ್ಲಿ ಭಾರತದ ಒಟ್ಟು 49 ವಿವಿಗಳು ಸ್ಥಾನ ಪಡೆದಿವೆ.

IISc Bengaluru Is Indias Best Institute
Author
Bengaluru, First Published Sep 27, 2018, 1:23 PM IST

ಲಂಡನ್: ಭಾರತದ ಅತ್ಯುತ್ತಮ ವಿವಿಗಳ ಪಟ್ಟಿಯೊಂದು ಬಿಡುಗಡೆಯಾಗಿದ್ದು, ಅದರಲ್ಲಿ ಇದೇ ಮೊದಲ ಬಾರಿಗೆ ಕರ್ನಾಟಕದ ಜಗದ್ಗುರು ಶ್ರೀ ಶಿವರಾತ್ರೀಶ್ವರ (ಜೆಎಸ್‌ಎಸ್) ವಿಶ್ವವಿದ್ಯಾಲಯ ಸ್ಥಾನ ಪಡೆಯುವುದರ ಜೊತೆಗೆ ಟಾಪ್ 5ನೇ ಸ್ಥಾನ ಪಡೆದಿದೆ. ‘ಟೈಮ್ಸ್ ಹೈಯರ್ ಎಜುಕೇಷನ್ ವರ್ಲ್ಡ್ ಯೂನಿವರ್ಸಿಟಿ  ರ್ಯಾಕಿಂಗ್’ ನಲ್ಲಿ ಈ ಮಾಹಿತಿ ಇದೆ.  

ಇನ್ನು ಭಾರತದ ಟಾಪ್ ವಿವಿ ಸ್ಥಾನವನ್ನು ಬೆಂಗಳೂರಿನ ಐಐಎಸ್‌ಸಿ ಕಾಯ್ದುಕೊಂಡಿದೆ. 2019 ರ ವಿಶ್ವ ವಿವಿ  ರ್ಯಾಕಿಂಗ್ ಪಟ್ಟಿಯಲ್ಲಿ ಭಾರತದ ಒಟ್ಟು 49 ವಿವಿಗಳು ಸ್ಥಾನ ಪಡೆದಿವೆ. ಕಳೆದ ವರ್ಷದ ಈ ವಿವಿಗಳ ಪಟ್ಟಿಯಲ್ಲಿ ಭಾರತದ 42 ವಿವಿಗಳು ಮಾತ್ರವೇ ಸ್ಥಾನ ಪಡೆದಿದ್ದವು. ಈ ಬಾರಿಯ ವಿವಿಗಳ ರ್ಯಾಂಕಿಂಗ್  ಪಟ್ಟಿಯಲ್ಲಿ ಐಐಟಿ ಇಂದೋರ್, ಐಐಟಿ ಬಾಂಬೆ, ಐಐಟಿ ರೂರ್ಕಿ ಕ್ರಮವಾಗಿ 2,3 ಮತ್ತು 4ನೇ ಸ್ಥಾನ ಪಡೆದಿವೆ.

Follow Us:
Download App:
  • android
  • ios