ಅನಾರೋಗ್ಯ ಕಾರಣವನ್ನು ಮುಂದಿಟ್ಟುಕೊಂಡು ಯಾರು ಅಧಿಕಾರ ದುರುಪಯೋಗ ಪಡಿಸಿಕೊಳ್ಳಬಾರದು. ತಮ್ಮ ಪ್ರಭಾವ ಬಳಸಿ ವಿಶೇಷ ವೈದ್ಯರ ಬಳಿ ಚಿಕಿತ್ಸೆ ಪಡೆಯಲು ಇಂತಹ ಸಮಯವನ್ನು ಬಳಸಿಕೊಳಗಳುತ್ತಾರೆ. ಹೈಫೈ ಎಸಿ ಆಸ್ಪತ್ರೆಯಲ್ಲಿ‌ ಚಿಕಿತ್ಸೆ ಪಡೆಯೋ ನೆಪದಲ್ಲಿ‌ ಹಾಯಾಗಿರುತ್ತಾರೆ. ಅಲ್ಲಿ ಯಾವ ವ್ಯಕ್ತಿಯನ್ನು ಬೇಕಾದರು ಭೇಟಿಯಾಗುವ ಸಾಧ್ಯತೆ ಇರುತ್ತದೆ ಎಂದು ರೂಪಾ ಟ್ವೀಟ್ ಮಾಡಿದ್ದಾರೆ.
ಬೆಂಗಳೂರು(ಮಾ.07): ಅಕ್ರಮ ಆಸ್ತಿ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರೋ ಎಐಎಡಿಎಂಕೆ ಪಕ್ಷದ ನಾಯಕಿ ಶಶಿಕಲಾ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಹೀಗಂತ ಜೈಲಿನ ಮೂಲಗಳಿಂದ ಮಾಹಿತಿ ಹೊರಬೀಳುತ್ತಿದ್ದಂತೆ, ಐಪಿಎಸ್ ಅಧಿಕಾರಿ ರೂಪಾ ಟ್ವಿಟರ್ ಮೂಲಕ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಅನಾರೋಗ್ಯ ಕಾರಣವನ್ನು ಮುಂದಿಟ್ಟುಕೊಂಡು ಯಾರು ಅಧಿಕಾರ ದುರುಪಯೋಗ ಪಡಿಸಿಕೊಳ್ಳಬಾರದು. ತಮ್ಮ ಪ್ರಭಾವ ಬಳಸಿ ವಿಶೇಷ ವೈದ್ಯರ ಬಳಿ ಚಿಕಿತ್ಸೆ ಪಡೆಯಲು ಇಂತಹ ಸಮಯವನ್ನು ಬಳಸಿಕೊಳಗಳುತ್ತಾರೆ. ಹೈಫೈ ಎಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯೋ ನೆಪದಲ್ಲಿ ಹಾಯಾಗಿರುತ್ತಾರೆ. ಅಲ್ಲಿ ಯಾವ ವ್ಯಕ್ತಿಯನ್ನು ಬೇಕಾದರು ಭೇಟಿಯಾಗುವ ಸಾಧ್ಯತೆ ಇರುತ್ತದೆ ಎಂದು ರೂಪಾ ಟ್ವೀಟ್ ಮಾಡಿದ್ದಾರೆ.
ಈ ಹಿಂದೆ ನಾನು ಕಾರಾಗೃಹಗಳ ಡಿಐಜಿ ಆಗಿದ್ದಾಗ ಹೊಸ ನಿಯಮ ಜಾರಿಗೆ ತಂದಿದ್ದೆ. ಪ್ರತಿ ಕೈದಿಗೂ ಟಿಬಿ ಮತ್ತು ಎಚ್'ಐವಿ ಸೇರಿದಂತೆ ಎಲ್ಲಾ ಬಗೆಯ ಟೆಸ್ಟ್' ಗಳನ್ನು ಜೈಲಿನ ಆಸ್ಪತ್ರೆಯಲ್ಲೇ ಮಾಡಿಸಲಾಗುತ್ತಿತ್ತು. ಅದರ ಬಳಕೆಯಾಗಬೇಕಿದೆ ಅಂತ ಐಪಿಎಸ್ ಅಧಿಕಾರಿ ರೂಪಾ ಟ್ವೀಟ್ ಮಾಡಿದ್ದಾರೆ.
