Asianet Suvarna News Asianet Suvarna News

(ವಿಡಿಯೋ)ನವಜಾತ ಶಿಶುವಿನ ಅಂತ್ಯಸಂಸ್ಕಾರಕ್ಕೆ 700 ರೂ. ಲಂಚ: ಮಗುವಿನ ಅಂತ್ಯಸಂಸ್ಕಾರಕ್ಕೆ ಪರದಾಡಿದ ಅಜ್ಜಿ

ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಮತ್ತೊಂದು ಯಡವಟ್ಟು ನಡೆದಿದೆ. ಹಣ ನೀಡದಕ್ಕೆ ನವಜಾತ ಶಿಶುವಿನ ಮೃತದೇಹ ಮುಟ್ಟಲು ನಿರಾಕರಿಸಿದೆ ಆಸ್ಪತ್ರೆಯ ಸಿಬ್ಬಂದಿ ಅಮಾನವೀಯವಾಗಿ ವರ್ತಿಸಿದ ಘಟನೆ ಕಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ. ಇದರಿಂದಾಗಿ ಸತತ ನಾಲ್ಕು ಗಂಟೆಗಳ ಕಾಲ ನವಜಾತ ಶಿಶುವಿನ ಮೃತದೇಹ ರೋಗಿಯ ಸಂಬಂಧಿ ಆಸ್ಪತ್ರೆಯ ಬಾಗಿಲಲ್ಲೇ ಹೊತ್ತು ನಿಂತಿರುವ ದೃಶ್ಯ ಸುವರ್ಣ ನ್ಯೂಸ್ ಸೆರೆಹಿಡಿದಿದೆ.

Ignorance in govt hospital of hubbli
  • Facebook
  • Twitter
  • Whatsapp

ಹುಬ್ಬಳ್ಳಿ(ಜೂ.03): ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಮತ್ತೊಂದು ಯಡವಟ್ಟು ನಡೆದಿದೆ. ಹಣ ನೀಡದಕ್ಕೆ ನವಜಾತ ಶಿಶುವಿನ ಮೃತದೇಹ ಮುಟ್ಟಲು ನಿರಾಕರಿಸಿದೆ ಆಸ್ಪತ್ರೆಯ ಸಿಬ್ಬಂದಿ ಅಮಾನವೀಯವಾಗಿ ವರ್ತಿಸಿದ ಘಟನೆ ಕಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ. ಇದರಿಂದಾಗಿ ಸತತ ನಾಲ್ಕು ಗಂಟೆಗಳ ಕಾಲ ನವಜಾತ ಶಿಶುವಿನ ಮೃತದೇಹ ರೋಗಿಯ ಸಂಬಂಧಿ ಆಸ್ಪತ್ರೆಯ ಬಾಗಿಲಲ್ಲೇ ಹೊತ್ತು ನಿಂತಿರುವ ದೃಶ್ಯ ಸುವರ್ಣ ನ್ಯೂಸ್ ಸೆರೆಹಿಡಿದಿದೆ.

ನವಜಾತ ಶಿಶುವಿನ ಅಂತ್ಯಕ್ರಿಯೆಗೆ ಹಣದ ಬೇಡಿಕೆಯಿಟ್ಟಿ ಸಿಬ್ಬಂದಿ, ಹಣ ನೀಡದಿದ್ದಾಗ ಅಂತ್ಯಕ್ರಿಯೆ ನಡೆಸಲು ನಿರಾಕರಿಸಿದ್ದಾರೆ. ೭ ನೂರು ರೂಪಾಯಿ ಹಣ ನೀಡಿದ್ರೆ ಮಾತ್ರ ಅಂತ್ಯಕ್ರಿಯೆ ನಡೆಸುವುದಾಗಿ ಹೇಳಿದ್ದಾರೆ. ಮೂರು ನೂರು ರೂಪಾಯಿ ಹಣ ನೀಡಲು ಮುಂದಾದರೂ ಮೃತದೇಹ ಮುಟ್ಟಲು ನಿರಾಕರಿಸಿದ್ದಾರೆ. ಇದರಿಂದಾಗಿ ಮೃತದೇಹವನ್ನು  ಪ್ಲಾಸ್ಟಿಕ್ ಕವರ್'ನಲ್ಲಿ ಹಿಡಿದು ನಿಂತ ರೋಗಿಯ ಸಂಬಂಧಿ ಶಂಕ್ರವ್ವ ಎಷ್ಟೇ ಗೋಗರಿದರು ಕರುಣೆ ತೋರದೆ ಆಸ್ಪತ್ರೆಯ ಸಿಬ್ಬಂದಿ ಅಮಾನವೀಯವಾಗಿ ವರ್ತಿಸಿದ್ದಾರೆ.

ಸವಣೂರು ಮೂಲದ ಜಯಾ ಎಂಬ ಮಹಿಳೆಗೆ  ನಿನ್ನೆ ಸಂಜೆ ಹೆರಿಗೆಯಾಗಿತ್ತು. ಹೆರಿಗೆ ಬಳಿಕ ಶಿಶು ಮೃತಪಟ್ಟಿದೆ. ಹಸಿ ಬಾಣಂತಿ ಜಯಾಳಿಗೆ ತೀವ್ರ ರಕ್ತಸ್ರಾವ ದಿಂದ ಬಳಲುತ್ತಿರುವ  ಜಯಾಳ ತಾಯಿ ಶಂಕ್ರವ್ವ ಶಿಶುವಿನ ಅಂತ್ಯಕ್ರಿಯೆ ಗೆ ಆಸ್ಪತ್ರೆಯ ಸಿಬ್ಬಂದಿಯ ಸಹಾಯ ಕೇಳಿದ್ದರು‌. ಆದರೆ ಸಿಬ್ಬಂದಿ ಹಣದ ಬೇಡಿಕೆ ಇಟ್ಟಿದ್ದಾರೆ‌. ಸುವರ್ಣ ನ್ಯೂಸ್ ಕಿಮ್ಸ್ ಆಸ್ಪತ್ರೆಯ ಅವ್ಯವಸ್ಥೆ ಕುರಿತು ರಿಯಲಿಟಿ ಚೆಕ್ ನಡೆಸುವ ವೇಳೆ ಈ ಘಟನೆ ಬೆಳಕಿಗೆ ಬಂದಿದೆ‌.

ಈ ಪ್ರಕರಣದ ಕುರಿತು ಸುವರ್ಣ ನ್ಯೂಸ್ ಆಸ್ಪತ್ರೆಯ ಅಧೀಕ್ಷಕ ಡಾ.ಶಿವಪ್ಪ  ಅವರ ಗಮನಕ್ಕೆ ತರುತ್ತಿದ್ದಂತೆ ದೌಡಾಸಿ ಬಂದ ಆಸ್ಪತ್ರೆಯ ಅಧಿಕ್ಷಕರು, ನವಜಾತ ಶಿಶುವಿನ ಅಂತ್ಯಕ್ರಿಯೆ ನಡೆಸುವ ವ್ಯವಸ್ಥೆ ಮಾಡಿದರು. ನವಜಾತಶಿವಿನ ಮೃತದೇಹ ಇದ್ದ ಕ್ಯಾರಿಬ್ಯಾಗ್ ನ ಶವಗಾರದ ಸಿಬ್ಬಂದಿ ಗೆ ಹಸ್ತಾಂತರಿಸಿ ಅಂತ್ಯಕ್ರಿಯೆ ವ್ಯವಸ್ಥೆ ಮಾಡಿಸುವ ಭರವಸೆ ನೀಡಿದರು.‌

Follow Us:
Download App:
  • android
  • ios