ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೂತನ ಆಪ್ತ ಕಾರ್ಯದರ್ಶಿ ನೇಮಕ| ಐಎಫ್ಎಸ್ ಅಧಿಕಾರಿ ವಿವೇಕ್ ಕುಮಾರ್ ಪ್ರಧಾನಿ ಆಪ್ತ ಕಾರ್ಯದರ್ಶಿ| ಪ್ರಧಾನಿ ಮೋದಿ ನೇತೃತ್ವದ ಸಂಪುಟ ನೇಮಕಾತಿ ಸಮಿತಿ ಆದೇಶ|  ಉಪೇಂದ್ರ ಸಿಂಗ್ ಪನಾಮಾಗೆ ಭಾರತೀಯ ರಾಯಭಾರಿ| ಸಂಜೀವ್ ಕುಮಾರ್ ಇಸ್ರೇಲ್’ಗೆ ಭಾರತೀಯ ರಾಯಭಾರಿ|

ನವದೆಹಲಿ(ಜು.19): ಮಹತ್ವದ ಬೆಳವಣಿಗೆಯೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಆಪ್ತ ಕಾರ್ಯದರ್ಶಿಯಾಗಿ ಐಎಫ್ಎಸ್ ಅಧಿಕಾರಿ ವಿವೇಕ್ ಕುಮಾರ್ ಅವರನ್ನು ನೇಮಕ ಮಾಡಲಾಗಿದೆ. 

ಪ್ರಧಾನಿ ಕಾರ್ಯಾಲಯದಲ್ಲಿ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದ ವಿವೇಕ್ ಕುಮಾರ್ ಅವರನ್ನು, ಪ್ರಧಾನಿ ಮೋದಿ ನೇತೃತ್ವದ ಸಂಪುಟ ನೇಮಕಾತಿ ಸಮಿತಿ ಪ್ರಧಾನಿ ಆಪ್ತ ಕಾರ್ಯದರ್ಶಿಯಾಗಿ ನೇಮಕ ಮಾಡಿದೆ.

ಈ ಕುರಿತು ಮಾಹಿತಿ ನೀಡಿರುವ ಪ್ರಧಾನಿ ಕಾರ್ಯಾಲಯ, ವಿವೇಕ್ ಕುಮಾರ್ ತಕ್ಷಣದಿಂದಲೇ ಪ್ರಧಾನಿ ಆಪ್ತ ಕಾರ್ಯದರ್ಶಿಯಾಗಿ ಅಧಿಕಾರಿ ಸ್ವೀಕರಿಸಲಿದ್ದಾರೆ ಎಂದು ತಿಳಿಸಿದೆ.

Scroll to load tweet…

ಇದೇ ವೇಳೆ ಉಪೇಂದ್ರ ಸಿಂಗ್ ಅವರನ್ನು ಪನಾಮಾಗೆ ಭಾರತೀಯ ರಾಯಭಾರಿಯನ್ನಾಗಿ, ಸಂಜೀವ್ ಕುಮಾರ್ ಅವರನ್ನು ಇಸ್ರೇಲ್’ಗೆ ಭಾರತೀಯ ರಾಯಭಾರಿಯನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

Scroll to load tweet…