ಕರ್ತವ್ಯದ ವೇಳೆ ಮೃತಪಟ್ಟ ಅಧಿಕಾರಿಗೆ ಸರ್ಕಾರದಿಂದ ಅಗೌರವ

IFS Officer Manikandan Death News
Highlights

ಕರ್ತವ್ಯದ ವೇಳೆ ಅಧಿಕಾರಿ ಸತ್ತರೆ ಸರ್ಕಾರದಿಂದ ಸಿಗುವ ಮರ್ಯಾದೆ ಇದೇನಾ ಎನ್ನುವ ಪ್ರಶ್ನೆ ಇದೀಗ ಮೂಡಿದೆ. ಕರ್ತವ್ಯ ನಿರತ ಎಎಫ್ಎಸ್ ಅಧಿಕಾರಿ ಮೃತಪಟ್ಟಿದ್ದು, ಅವರಿಗೆ ಸರ್ಕಾರದಿಂದ ಅಗೌರವ ತೋರಿದ ಘಟನೆಯೊಂದು ಇದೀಗ ಬೆಳಕಿಗೆ ಬಂದಿದೆ.

ಬೆಂಗಳೂರು : ಕರ್ತವ್ಯದ ವೇಳೆ ಅಧಿಕಾರಿ ಸತ್ತರೆ ಸರ್ಕಾರದಿಂದ ಸಿಗುವ ಮರ್ಯಾದೆ ಇದೇನಾ ಎನ್ನುವ ಪ್ರಶ್ನೆ ಇದೀಗ ಮೂಡಿದೆ. ಕರ್ತವ್ಯ ನಿರತ ಎಎಫ್ಎಸ್ ಅಧಿಕಾರಿ ಮೃತಪಟ್ಟಿದ್ದು, ಅವರಿಗೆ ಸರ್ಕಾರದಿಂದ ಅಗೌರವ ತೋರಿದ ಘಟನೆಯೊಂದು ಇದೀಗ ಬೆಳಕಿಗೆ ಬಂದಿದೆ.

ಚುನಾವಣೆ ಭರಾಟೆಯಲ್ಲಿ ಮಾನವೀಯತೆಯನ್ನು ಸರ್ಕಾರ ಮರೆತಿದ್ದು, ಕಾಡಿನಲ್ಲಿ  ಕಾಡಾನೆ ದಾಳಿಗೆ ಸಿಲುಕಿ ಸಾವನ್ನಪ್ಪಿದ್ದ ಐಎಫ್ ಎಸ್ ಅಧಿಕಾರಿ ಮಣಿಕಂಠನ್ ಸಾವನ್ನಪ್ಪಿ ಒಂದು ವಾರ ಕಳೆದರೂ ಸರ್ಕಾರ ಯಾವುದೇ ಪರಿಹಾರವನ್ನು ಘೋಷಣೆ ಮಾಡಿಲ್ಲ.

ಕುಟುಂಬದ ಆಧಾರ ಸ್ತಂಭವಾಗಿದ್ದ ಮಣಿಕಂಠನ್ ಸಾವಿನಿಂದ  ಕುಟುಂಬ ಕಂಗಾಲಾಗಿದೆ. 10 ವರ್ಷದ ವರಿದ್ದಾಗಲೇ ಮಣಿಕಂಠನ್ ತಂದೆಯನ್ನು ಕಳೆದುಕೊಂಡಿದ್ದರು. ಬಡತನದಿಂದ ಬಂದ ಅವರು ಆನೆ ದಾಳಿಯಿಂದ ಮೃತಪಟ್ಟಿದ್ದು, ಅವರ ಸಾವಿಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಕಂಬನಿ ಮಿಡಿದಿದ್ದರು. ಆದರೆ ರಾಜ್ಯ ಸರ್ಕಾರ ಮಾತ್ರ ಈ ಬಗ್ಗೆ ಯಾವುದೇ ರೀತಿಯಾದ ಪ್ರತಿಕ್ರಿಯೆಯನ್ನು ನೀಡಿಲ್ಲ. ಇನ್ನು ಅರಣ್ಯ ಸಚಿವರಾದ ರಮಾನಾಥ ರೈ ಅವರೂ ಕೂಡ, ಅವರ ಕುಟುಂಬವನ್ನು ಭೇಟಿ ಮಾಡಿಲ್ಲ.

ಇಲಾಖೆಯಲ್ಲಿ ದಕ್ಷತೆ ಹಾಗೂ ಪ್ರಮಾಣಿಕತೆಗೆ ಹೆಸರಾಗಿದ್ದ ಮಣಿಕಂಠನ್ ಹಲವು ವರ್ಷಗಳಿಂದ ಬೆಂಗಳೂರಿನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಅಲ್ಲದೇ ಅವರ ಅಂತಿಮ ದರ್ಶನಕ್ಕೂ ಕೂಡ ಸಚಿವರು ತೆರಳಿಲ್ಲ. ಪ್ರಧಾನ ಅರಣ್ಯ ರಕ್ಷಣಾ ಧಿಕಾರಿಗಳಿಂದ ಪರಿಹಾರಕ್ಕೆ ಶಿಫಾರಸ್ಸಾಗಿದ್ದರೂ ಕೂಡ ಸರ್ಕಾರ ಸ್ಪಂದಿಸಿಲ್ಲ .

loader