ಬೆಂಗಳೂರು[ಜು.16]: ಐಎಂಎ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಸೋಮವಾರ ಎಸ್‌ಐಟಿ ಪೊಲೀಸರು ರೋಷನ್ ಬೇಗ್‌ರನ್ನು ಬಂಧಿಸಿದ್ದಾರೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಜಮೀರ್ ಅಹ್ಮದ್‌ರನ್ನು ಯಾಕೆ ಬಂಧಿಸಿಲ್ಲ? ಅವರನ್ನೂ ಬಂಧಿಸಬೇಕು ಎಂದು ಮಾಜಿ ಡಿಸಿಎಂ ಹಾಗೂ ಬಿಜೆಪಿ ನಾಯಕ ಕೆ.ಎಸ್ ಈಶ್ವರಪ್ಪ ಪ್ರಶ್ನಿಸಿದ್ದಾರೆ.

ಐಎಂಎ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿದ ಮಾಜಿ ಡಿಸಿಎಂ ಕೆ. ಎಸ್. ಈಶ್ವರಪ್ಪ 'ಐಎಂಎ ಪ್ರಕರಣ ಯಾರು ಲೂಟಿ ಕೋರರಿದಾರೋ ಅವರನ್ನು ಬಂಧಿಸಿ ಮೋಸ ಹೋದವರಿಗೆ ಹಣ ಕೊಡಿಸಬೇಕಾದದ್ದು ಸರ್ಕಾರದ ಕರ್ತವ್ಯ. ಆದರೆ ಎಸ್‌ಐ ಟಿಯನ್ನು ರಾಜಕೀಯ ದಾಳವನ್ನಾಗಿ ಸರ್ಕಾರ ಬಳಸಿಕೊಳ್ತಿದೆ. ಈಗಾಗಲೇ ಇಡಿ ನೋಟಿಸ್ ಬೇಗ್ ಹಾಗೂ ಜಮೀರ್ ಇಬ್ಬರಿಗೂ ಕೊಟ್ಟಿದ್ದಾರೆ. ಆದರೆ ಎಸ್‌ಐಟಿ ಬೇಗ್ ರನ್ನು ಮಾತ್ರ ಅರೆಸ್ಟ್ ಮಾಡಿದೆ ಜಮೀರ್ ಬಂಧನ ಯಾಕಿಲ್ಲ? ಮೈತ್ರಿ  ಸರ್ಕಾರ ವಿರುದ್ಧ ಬೇಗ್ ಇದ್ದಾರೆ ಅನ್ನೋದೆ ಇದಕ್ಕೆ ಕಾರಣನಾ? ಪ್ರಾಮಾಣಿಕತೆ ಇದ್ರೆ ಜಮೀರ್ ನನ್ನು ಅರೆಸ್ಟ್ ಮಾಡಿ ಕ್ರಮ ತೆಗೆದುಕೊಳ್ಳಿ' ಎಂದಿದ್ದಾರೆ

ಇದೇ ಸಂದರ್ಭದಲ್ಲಿ ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ ಈಶ್ವರಪ್ಪ 'ಮನ್ಸೂರ್ ಜೀವಕ್ಕೆ ಭಯ ಅಂದಿದ್ದಾನೆ. ಅದಕ್ಕೆ ಇವರು ಅದರ ಕುರಿತಂತೆ ಏನು ಮಾಡುತ್ತಿಲ್ಲ. ಮುಸ್ಲಿಮ್ ರಕ್ಷಣೆ ಅಂತ ಕಾಂಗ್ರೆಸ್ ಹೇಳುತ್ತೆ. ಆದರೆ ಈ ಪ್ರಕರಣದಲ್ಲಿ ಮುಸ್ಲಿಂಗೆ ಯಾವ ರೀತಿ ಸಹಾಯನೂ ಮಾಡ್ತಿಲ್ಲ. ಹೀಗಾಗಿ ಜಮೀರ್‌ನನ್ನು ಕೂಡಾ ಅರೆಸ್ಟ್ ಮಾಡಿ ಎಂದು ಮುಖ್ಯಮಂತ್ರಿಗೆ ಹೇಳಲಿಚ್ಛಿಸುತ್ತೀನಿ' ಎಂದಿದ್ದಾರೆ.