ಸಚಿವ ವಿನಯ ಕುಲಕರ್ಣಿ ಪರ ಸಿಎಂ ಮತ್ತೆ ಬ್ಯಾಟಿಂಗ್ ಮಾಡಿದ್ದಾರೆ.  ವಿನಯ್​ ಕುಲಕರ್ಣಿ ವಿರುದ್ಧ ಮಾಡಿರುವ ಆರೋಪಗಳು ಎಲ್ಲ ಸುಳ್ಳು. ಸಚಿವರ ವಿರುದ್ಧದ ಆರೋಪಕ್ಕೆ  ಸೂಕ್ತ ಸಾಕ್ಷಾಧಾರಗಳು ಇಲ್ಲ. ಯೋಗೇಶಗೌಡ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆ ಕೋರ್ಟ್​ನಲ್ಲಿದೆ. ಎಲ್ಲವೂ ರಾಜಕೀಯ ಪ್ರೇರಿತ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.  

ಬೆಂಗಳೂರು (ಡಿ.01): ಸಚಿವ ವಿನಯ ಕುಲಕರ್ಣಿ ಪರ ಸಿಎಂ ಮತ್ತೆ ಬ್ಯಾಟಿಂಗ್ ಮಾಡಿದ್ದಾರೆ. ವಿನಯ್​ ಕುಲಕರ್ಣಿ ವಿರುದ್ಧ ಮಾಡಿರುವ ಆರೋಪಗಳು ಎಲ್ಲ ಸುಳ್ಳು. ಸಚಿವರ ವಿರುದ್ಧದ ಆರೋಪಕ್ಕೆ ಸೂಕ್ತ ಸಾಕ್ಷಾಧಾರಗಳು ಇಲ್ಲ. ಯೋಗೇಶಗೌಡ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆ ಕೋರ್ಟ್​ನಲ್ಲಿದೆ. ಎಲ್ಲವೂ ರಾಜಕೀಯ ಪ್ರೇರಿತ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಸಚಿವರ ಕೈವಾಡದ ಬಗ್ಗೆ ಯಾವ ದಾಖಲೆ ಇದೆ‌? ಪೊಲೀಸ್ ಅಧಿಕಾರಿ ಸಂಧಾನಕ್ಕೆ ಬಂದ ಬಗ್ಗೆ ಯಾವುದೇ ದಾಖಲೆಗಳು ಇಲ್ಲ. ದಾಖಲೆ ಇದ್ದರೆ ಕೊಡಿ ಎಂದು ಸಿಎಂ ಸಿದ್ದರಾಮಯ್ಯ ಕೇಳಿದ್ದಾರೆ. ದಾಖಲೆಗಳನ್ನು ಎಲ್ಲಿಗೆ ತಲುಪಿಸಬೇಕು ಎಂದು ಸುವರ್ಣ ನ್ಯೂಸ್ ವರದಿಗಾರ ಮರು ಪ್ರಶ್ನಿಸಿದಾಗ, ನನ್ನ ಕಚೇರಿಗೆ ತಲುಪಿಸಿ ಎಂದ ಸಿಎಂ ಹೇಳಿದ್ದಾರೆ.

ಇನ್ನು ಮುಂದುವರೆದು ಪ್ರಶ್ನಿಸಿದಾಗ ಸುವರ್ಣ ನ್ಯೂಸ್ ವರದಿಗಾರನ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡದೇ ಸಿಎಂ ಜಾರಿಕೊಂಡಿದ್ದಾರೆ.