ಸದ್ಯ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಮಹಾಭಾರತ ಜಗಳ ಆರಂಭವಾಗಿದೆ. ಮಹಾಭಾರತದ ಕೌರವರಿಗೆ ಬಿಜೆಪಿ ಹಾಗೂ ಆರ್'ಎಸ್'ಎಸ್ ಹೋಲಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿಕೆಗೆ ಇದೀಗ ಬಿಜೆಪಿ ಟ್ವಿಟರ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರು : ಸದ್ಯ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಮಹಾಭಾರತ ಜಗಳ ಆರಂಭವಾಗಿದೆ. ಮಹಾಭಾರತದ ಕೌರವರಿಗೆ ಬಿಜೆಪಿ ಹಾಗೂ ಆರ್'ಎಸ್'ಎಸ್ ಹೋಲಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿಕೆಗೆ ಇದೀಗ ಬಿಜೆಪಿ ಟ್ವಿಟರ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.
ಕಾಂಗ್ರೆಸ್’ನವರು ಪಾಂಡವರಾದರೆ ಕೃಷ್ಣನನ್ನು ಏಕೆ ಕೌರವರ ಜೊತೆ ಕಳಿಸಿದರು. ಕೃಷ್ಣ ಅವರ ಬಳಿಯೆ ಇರಬೇಕಿತ್ತು. ಪಾಂಡವರನ್ನು ಬಿಟ್ಟು ಕೃಷ್ಣ ಕೌರವರ ಜೊತೆ ಸೇರಿದ್ದು ಏಕೆ ಎಂದು ಕೇಳಿದ್ದಾರೆ.
ಇತ್ತೀಚೆಗಷ್ಟೇ ಕಾಂಗ್ರೆಸ್ ಹಿರಿಯ ಮುಖಂಡ ಎಸ್.ಎಂ ಕೃಷ್ಣ ಅವರು ಕಾಂಗ್ರೆಸ್ ತೊರೆದು ಬಿಜೆಪಿಯನ್ನು ಸೇರ್ಪಡೆಯಾಗಿದ್ದು, ಈ ಸಂಬಂಧವೇ ಈ ಹೇಳಿಕೆಯನ್ನು ನೀಡಲಾಗಿದೆ ಎನ್ನಲಾಗುತ್ತದೆ.
