ಮಹಿಳೆಯರು ಶಬರಿಮಲೆ ದೇಗುಲ ಪ್ರವೇಶಿಸುವುದನ್ನು ಖಂಡಿಸಿ  ಕೇರಳದ ಅನೇಕ ಕಡೆ ಪ್ರತಿಭಟನೆಗಳು ಮುಂದುವರಿಕೆ |  ಕೇರಳ ಶಿವಸೇನೆಯಿಂದ 7 ಮಹಿಳೆಯರ ‘ಆತ್ಮಹತ್ಯಾ ದಳ!’ ಶಬರಿಮಲೆಗೆ ಮಹಿಳೆಯರು ಪ್ರವೇಶಿಸಿದರೆ ಆತ್ಮಹತ್ಯೆ: ಬೆದರಿಕೆ

ತಿರುವನಂತಪುರಂ (ಅ. 14): ಕೇರಳದ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ದೇವಾಲಯಕ್ಕೆ 10ರಿಂದ 50 ವರ್ಷ ವಯಸ್ಸಿನ ಮಹಿಳೆಯರು ಪ್ರವೇಶಿಸಿದರೆ ತನ್ನ ‘ಆತ್ಮಹತ್ಯಾ ದಳ’ದ 7 ಮಹಿಳಾ ಸದಸ್ಯರು ಆತ್ಮಹತ್ಯೆ ಮಾಡಿಕೊಳ್ಳಲಿದ್ದಾರೆ ಎಂದು ಕೇರಳ ಶಿವಸೇನಾ ಘಟಕ ಎಚ್ಚರಿಕೆ ನೀಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮುಚ್ಚಿರುವ ದೇವಾಲಯದ ಬಾಗಿಲು ಅಕ್ಟೋಬರ್‌ 17ರಂದು ತೆರೆಯಲಿದ್ದು, ಅಂದು ಮಹಿಳೆಯರ ಪ್ರವೇಶ ತಡೆಯಲು ಪಂಪಾ ನದಿ ತಟದಲ್ಲಿ ಮಹಿಳೆಯರಿಂದಲೇ ಪ್ರತಿಭಟನೆ ನಡೆಸಲಾಗುತ್ತದೆ. ಈ ಪ್ರತಿಭಟನಾನಿರತರಲ್ಲಿ 7 ಮಂದಿಯ ‘ಆತ್ಮಹತ್ಯಾ ದಳ’ ಇರಲಿದೆ. ಒಂದು ವೇಳೆ ಮಹಿಳೆಯರಿಗೆ ಪ್ರವೇಶ ಲಭಿಸಿದರೆ ಅವರು ಪಂಪಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲಿದ್ದಾರೆ ಎಂದು ಕೇರಳ ಶಿವಸೇನಾ ನಾಯಕ ಪೆರಿಂಗಮ್ಮಾಳ್‌ ಆಜಿ ಶನಿವಾರ ಹೇಳಿದರು.

ಈ ನಡುವೆ, ಶಬರಿಮಲೆ ಅಯ್ಯಪ್ಪ ದೇವಸ್ವಂ ಮಂಡಳಿಯ ಮಾಜಿ ಅಧ್ಯಕ್ಷ ಪ್ರಯರ್‌ ಗೋಪಾಲಕೃಷ್ಣನ್‌ ಕೂಡ ಆಘಾತಕಾರಿ ಹೇಳಿಕೆ ನೀಡಿದ್ದಾರೆ. ‘ದೇಗುಲ ಪ್ರವೇಶಿಸುವ ಮಹಿಳೆಯರನ್ನು ಹುಲಿಗಳು ಹಾಗೂ ಪುರುಷರು ಹಿಡಿಯಲಿದ್ದಾರೆ’ ಎಂದು ಪ್ರಯರ್‌ ಎಚ್ಚರಿಸಲಿದ್ದಾರೆ.