ನವದೆಹಲಿ (ಮೇ. 01): ಮೊಬೈಲ್ ಫೋನ್‌ನಲ್ಲಿ ಮಾತನಾಡುತ್ತಾ ವಾಹನ ಚಾಲನೆ ಮಾಡಿದರೆ ರಾಜಸ್ಥಾನದಲ್ಲಿ ವಾಹನ ಸವಾರರ ಚಾಲನಾ ಪರವಾನಗಿ ರದ್ದಾಗಲಿದೆ. ರಾಜಸ್ಥಾನ ಹೈಕೋರ್ಟ್‌ನ ಜೋಧಪುರ  ಪೀಠ ಇಂಥದ್ದೊಂದು ಆದೇಶ ಹೊರಡಿಸಿದೆ.

ಮೊಬೈಲ್‌ನಲ್ಲಿ ಮಾತನಾಡುತ್ತಾ ವಾಹನ ಚಾಲನೆ ಮಾಡುವವರ ಫೋಟೋಗಳನ್ನು ತೆಗೆದು, ಅವರ ಚಾಲನಾ ಪರವಾನಗಿ ರದ್ದು ಮಾಡಲು ಸ್ಥಳೀಯ  ಸಾರಿಗೆ ಕಚೇರಿಗೆ ಕಳುಹಿಸಲು ಟ್ರಾಫಿಕ್ ಪೊಲೀಸರಿಗೆ ಕೋರ್ಟ್ ಸೂಚಿಸಿದೆ. ವಾಹನ ಚಾಲನೆ  ವೇಳೆ ಮೊಬೈಲ್ ಸಂಭಾಷಣೆಯಿಂದ ಅಪಘಾತಗಳು ಸಂಭವಿಸುತ್ತಿವೆ ಎಂದು ಹೆಚ್ಚುವರಿ ಸಂಚಾರಿ  ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದರು.