ಮನೋಹರ್ ಪರ್ರಿಕರ್ ಗೋವಾ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿರುವುದು ಕೇವಲ ಸಚಿವರ ನಡೆಯಾಗಿದ್ದು ಇದಕ್ಕೆ ಸಾಂವಿಧಾನಿಕ ಮಹತ್ವವಿಲ್ಲ. 48 ಗಂಟೆಗಳಲ್ಲಿ ನಡೆಯುವ ವಿಶ್ವಾಸ ಮತಯಾಚನೆಯಲ್ಲಿ ಮುಖಭಂಗವಾಗಲಿದೆ ಎಂದು ಕಾಂಗ್ರೆಸ್ ನ ಅಭಿಷೇಕ್ ಮನು ಸಿಂಘ್ವಿ ಟೀಕಿಸಿದ್ದಾರೆ.

ನವದೆಹಲಿ (ಮಾ.14): ಮನೋಹರ್ ಪರ್ರಿಕರ್ ಗೋವಾ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿರುವುದು ಕೇವಲ ಸಚಿವರ ನಡೆಯಾಗಿದ್ದು ಇದಕ್ಕೆ ಸಾಂವಿಧಾನಿಕ ಮಹತ್ವವಿಲ್ಲ. 48 ಗಂಟೆಗಳಲ್ಲಿ ನಡೆಯುವ ವಿಶ್ವಾಸ ಮತಯಾಚನೆಯಲ್ಲಿ ಮುಖಭಂಗವಾಗಲಿದೆ ಎಂದು ಕಾಂಗ್ರೆಸ್ ನ ಅಭಿಷೇಕ್ ಮನು ಸಿಂಘ್ವಿ ಟೀಕಿಸಿದ್ದಾರೆ.

ಮನೋಹರ್ ಪರ್ರಿಕರ್ ವಿರುದ್ಧ ವಾಗ್ದಾಳಿ ನಡೆಸುತ್ತಾ, 2 ದಿನಗಳ ಮಟ್ಟಿಗೆ ಅವರಿಗೆ ಸುಲ್ತಾನ ನಾಗಬೇಕೆನ್ನುವ ಇರಾದೆಯಿದ್ದರೆ ಅವರು ಪ್ರಮಾಣವಚನ ಸ್ವೀಕರಿಸಿರುವುದನ್ನು ಸ್ವಾಗತಿಸುತ್ತೇನೆ ಎಂದು ಸಿಂಗ್ವಿ ಹೇಳಿದ್ದಾರೆ.

ಕಾಂಗ್ರೆಸ್ ನ ಟೀಕೆಗೆ ಉತ್ತರಿಸುತ್ತಾ ಪರ್ರಿಕರ್, ಕಾಂಗ್ರೆಸ್ ನಲ್ಲಿ ಅಂತಃಕಲಹ ಇರುವುದು ಎಲ್ಲರಿಗೂ ಗೊತ್ತಿರುವಂತದ್ದೇ ವಿಚಾರ ಹಾಗಾಗಿ ಯಾರೊಬ್ಬರೂ ಅವರಿಗೆ ಬೆಂಬಲಸಲು ತಯಾರಿಲ್ಲ. ಕಳೆದ 10 ವರ್ಷಗಳಲ್ಲಿ 12 ಜನ ಮುಖ್ಯಮಂತ್ರಿಗಳು ಬಂದು ಹೋಗಿದ್ದಾರೆ. ಪಕ್ಷದಲ್ಲಿರುವ ಅಂತಃಕಲಹದಿಂದ ಅಭಿವೃದ್ಧಿ ಕಡೆ ಗಮನ ಹರಿಸಿಲ್ಲ. ನಮಗೆ ಮೊದಲನೇ ದಿನ 21 ಶಾಸಕರ ಬೆಂಬಲವಿತ್ತು. ಇಂದು 22 ಸಂಖ್ಯಾಬಲವಿದೆ. ನಾಡಿದ್ದು ನಡೆಯುವ ವಿಶ್ವಾಸಮತ ಯಾಚನೆಯಲ್ಲಿ ಬಹುಮತ ಸಾಬೀತುಪಡಿಸುತ್ತೇವೆ. ಮುಂದಿನ 365*5 ನಾವೇ ಆಡಳಿತ ನಡೆಸುತ್ತೇವೆ ಎಂದು ಗುಡುಗಿದ್ದಾರೆ.