ಬೆಂಗಳೂರು (ಸೆ.12): ಸಾ.ರಾ.ಗೋವಿಂದುನೇತೃತ್ವದಲ್ಲಿ ಕೆಆರ್'ಎಸ್ ನಿಂದ ಬೆಂಗಳೂರಿನವರೆಗೆ  ಪಾದಯಾತ್ರೆ ನಡೆಸಲು ಚಿತ್ರೋದ್ಯಮ ನಿರ್ಧರಿಸಿತ್ತು. ಆದರೆ,ಪರಿಸ್ಥಿತಿ ತಿಳಿಯಾಗುವವರೆಗೆ ಪಾದಯಾತ್ರೆಗೆ ಅವಕಾಶ ಕೊಡದಿರಲು ಗೃಹ ಇಲಾಖೆ ನಿರ್ಧರಿಸಿದೆ.ಹೀಗಾಗಿ ಪಾದಯಾತ್ರೆಯ‌ನ್ನು ತಾತ್ಕಾಲಿಕವಾಗಿ ಮುಂದೂಡಿದ್ದೇವೆ.ಇದು ಜಯಲಲಿತಾಗೆ ನಾವು ಕೊಡುತ್ತಿರುವ ಎಚ್ಚರಿಕೆ.ತಮಿಳುನಾಡಿನಲ್ಲಿರುವ ಕನ್ನಡಿಗರ ಮೇಲೆ ದೌರ್ಜನ್ಯ ನಿಲ್ಲಿಸದೇ ಇದ್ದರೆ ಪರಿಣಾಮ ನೆಟ್ಟಗಾಗದುಎಂದು ಸಾ.ರಾ.ಗೋವಿಂದು ಹೇಳಿದ್ದಾರೆ.

ಸದ್ಯ ಬೆಂಗಳೂರಿನಲ್ಲಿ ಸೆಕ್ಷನ್ 144 ಹಾಕಲು ಸೂಚನೆ ಕೊಡಲಾಗಿದೆ. ಪಾಂಡವಪುರ ಮತ್ತು 4 ಡ್ಯಾಂಗಳ ಹತ್ತಿರ 144 ಸೆಕ್ಷನ್​ ಜಾರಿಗೊಳಿಸಲಾಗಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು158 ಕೆಎಸ್ಆರ್'ಪಿ ತುಕಡಿ, 20 ಹೋಂ ಗಾರ್ಡ್ ತುಕಡಿ ಹಾಕಿದ್ದೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್​ ಹೇಳಿದ್ದಾರೆ.