ವರದ್ದೇ ಸರ್ಕಾರ ಇದೆ. ಅವರು ಹಾಕಿಸಿಕೊಂಡ ಅಧಿಕಾರಿಗಳೇ ಇದ್ದಾರೆ. ನಾನೇನಾದ್ರೂ ಹಿಂದೆ ಸಚಿವನಾಗಿದ್ದಾಗ ತಪ್ಪು ಮಾಡಿದ್ರೆ ತನಿಖೆ ಮಾಡಿಸಿ ಜೈಲಿಗೆ ಕಳಿಸಲಿ ಎಂದು ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ಗೆ ಸವಾಲು ಹಾಕಿದವರು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ. ಶನಿವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಬೋರ್‌ ವೆಲ್‌ ಕೊರೆಯಿಸುವ ವಿಚಾರದಲ್ಲಿ ಅವ್ಯವಹಾರದ ಬಗ್ಗೆ ಸಚಿವ ಮಲ್ಲಿಕಾರ್ಜುನ ಮಾಡಿದ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಜವಾಬ್ದಾರಿಯುತ ಸ್ಥಾನದಲ್ಲಿರುವವರು ಗೌರವಯುತವಾಗಿ ಮಾತನಾಡುವುದ ಕಲಿಯಬೇಕೆಂದು ಸಲಹೆ ಮಾಡಿದರು.
ದಾವಣಗೆರೆ (ಅ.08): ಅವರದ್ದೇ ಸರ್ಕಾರ ಇದೆ. ಅವರು ಹಾಕಿಸಿಕೊಂಡ ಅಧಿಕಾರಿಗಳೇ ಇದ್ದಾರೆ. ನಾನೇನಾದ್ರೂ ಹಿಂದೆ ಸಚಿವನಾಗಿದ್ದಾಗ ತಪ್ಪು ಮಾಡಿದ್ರೆ ತನಿಖೆ ಮಾಡಿಸಿ ಜೈಲಿಗೆ ಕಳಿಸಲಿ ಎಂದು ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ಗೆ ಸವಾಲು ಹಾಕಿದವರು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ. ಶನಿವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಬೋರ್ ವೆಲ್ ಕೊರೆಯಿಸುವ ವಿಚಾರದಲ್ಲಿ ಅವ್ಯವಹಾರದ ಬಗ್ಗೆ ಸಚಿವ ಮಲ್ಲಿಕಾರ್ಜುನ ಮಾಡಿದ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಜವಾಬ್ದಾರಿಯುತ ಸ್ಥಾನದಲ್ಲಿರುವವರು ಗೌರವಯುತವಾಗಿ ಮಾತನಾಡುವುದ ಕಲಿಯಬೇಕೆಂದು ಸಲಹೆ ಮಾಡಿದರು.
ಈ ಹಿಂದೆ ಪಿಯು ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದಲ್ಲಿ ತಮ್ಮ ಪಾತ್ರವಿದೆಯೆಂದು ಆರೋಪ ಮಾಡಿದ್ದರು. ಹಾಗಿದ್ದರೆ ನನ್ನನ್ನೇಕೆ ಬಂಧಿಸಲಿಲ್ಲ? ಕೊಳವೆ ಬಾವಿ ಕೊರೆಯಿಸದೆ ನಕಲಿ ಬಿಲ… ತೆಗೆದುಕೊಂಡಿರುವುದನ್ನು ಸಾಕ್ಷಿ ಸಮೇತವಾಗಿ ತೋರಿಸಲಿ ಎಂದು ಸವಾಲು ಹಾಕಿದರು.
ಎಸ್.ಎಸ್. ಮಲ್ಲಿಕಾರ್ಜುನ ಏನು ಮಾಡ್ತಿದ್ದಾರೆ, ಯಾವ ಯಾವ ಕಾಮಗಾರಿಯಲ್ಲಿ ಏನೇನು ಆಗಿದೆ ಎಂಬುದು ನನಗೆ ಗೊತ್ತು. ಸಂದರ್ಭ ಬಂದಾಗ ಬಯಲಿಗೆಳೆಯುತ್ತೇನೆ. ಜಿಲ್ಲೆಯಲ್ಲಿ ಕುಡಿಯುವ ನೀರು ಸೇರಿದಂತೆ ಅನೇಕ ಜ್ವಲಂತ ಸಮಸ್ಯೆಗಳಿವೆ. ಅನಾವಶ್ಯಕ ಮಾತುಗಳ ನಿಲ್ಲಿಸಿ ಮೊದಲು ಜಿಲ್ಲೆ ಸುತ್ತಿ ಸಮಸ್ಯೆಗಳಿಗೆ ಪರಿಹಾರದ ಮಾರ್ಗ ಸೂಚಿಸಲಿ ಎಂದು ಆಗ್ರಹಿಸಿದರು.
ಬಿಜೆಪಿ ಮುಖಂಡರಾದ ಜಯಪ್ರಕಾಶ್ ಕೊಂಡಜ್ಜಿ, ಸಂಕೋಳ್ ಚಂದ್ರಶೇಖರ್, ಹೇಮಂತ್ ಕುಮಾರ್, ರಾಜಶೇಖರ್, ಕಲ್ಬುರ್ಗಿ ಪ್ರಭು ಇದ್ದರು.
