ಅಮೆರಿಕ ಪ್ರವಾಸದಲ್ಲಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ತಾವು ಪಕ್ಷಾಧ್ಯಕ್ಷರಾಗಲು ಸಿದ್ಧ ಎಂಬ ಸುಳಿವನ್ನು ಮತ್ತೊಮ್ಮೆ ನೀಡಿದ್ದಾರೆ.

ಪ್ರಿನ್ಸ್‌'ಟನ್(ಸೆ.21): ಅಮೆರಿಕ ಪ್ರವಾಸದಲ್ಲಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ತಾವು ಪಕ್ಷಾಧ್ಯಕ್ಷರಾಗಲು ಸಿದ್ಧ ಎಂಬ ಸುಳಿವನ್ನು ಮತ್ತೊಮ್ಮೆ ನೀಡಿದ್ದಾರೆ.

ಇಲ್ಲಿನ ವಿಶ್ವವಿದ್ಯಾಲಯದಲ್ಲಿ ನಡೆದ ಸಂವಾದದಲ್ಲಿ ಪಾಲ್ಗೊಂಡ ಅವರು, ‘ಕಾಂಗ್ರೆಸ್ ಚುಕ್ಕಾಣಿ ನನಗೆ ಸಿಕ್ಕರೆ, ಭಾರತದ 10 ವರ್ಷದ ಅಭಿವೃದ್ಧಿ ಪಥದ ದೂರದೃಷ್ಟಿತ್ವ ಸಿದ್ಧಪಡಿಸುವೆ. ಇದರಲ್ಲಿ ನಿರುದ್ಯೋಗ ಸಮಸ್ಯೆ ಹೇಗೆ ನಿವಾರಿಸಬಹುದು ಎಂಬುದೇ ಪ್ರಧಾನವಾಗಿರುತ್ತದೆ. ಕೃಷಿ, ಶಿಕ್ಷಣ ಮತ್ತು ಆರೋಗ್ಯಕ್ಕೂ ಒತ್ತು ನೀಡಲಾಗುತ್ತದೆ’ ಎಂದಿದ್ದಾರೆ.