ಇನ್ಮುಂದೆ ಮಚ್ಚು ಲಾಂಗ್ ಹಿಡಿದರೂ ಜೈಲುಪಾಲು

If hold Long mach Should go to Jail
Highlights

ರೌಡಿ ಚಟುವಟಿಕೆಗಳ ನಿಯಂತ್ರಣಕ್ಕೆ ಕಠಿಣ ಕ್ರಮ ಜರುಗಿಸಿರುವ ರಾಜ್ಯ ಸರ್ಕಾರವು, ಈಗ ತಮಿಳುನಾಡು ಮಾದರಿಯಲ್ಲೇ ಪಾತಕಲೋಕದಲ್ಲಿ ಲಾಂಗು, ಮಚ್ಚುಗಳ ಸದ್ದು ಅಡಗಿಸಲು ಮುಂದಾಗಿದೆ. ಹಲವು ದಿನಗಳಿಂದ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಗೆ ತಿದ್ದುಪಡಿ ತರುವಂತೆ ಪೊಲೀಸರ ಮನವಿಗೆ ಪುರಸ್ಕರಿಸಿರುವ ಸರ್ಕಾರವು, ಎರಡೂವರೆ ಅಡಿಗಿಂತ ಉದ್ದದ ಯಾವುದೇ ಅಸ್ತ್ರ ಬಳಸಿದರೂ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ
ಆದೇಶಿಸಿದೆ. ಆದರೆ, ಇದು ಅಪರಾಧ ಚಟುವಟಿಕೆಗಳಿಗೆ ಮಾತ್ರ ಕಾಯ್ದೆ ಅನ್ವಯವಾಗುತ್ತದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಬೆಂಗಳೂರು (ಫೆ. 19): ರೌಡಿ ಚಟುವಟಿಕೆಗಳ ನಿಯಂತ್ರಣಕ್ಕೆ ಕಠಿಣ ಕ್ರಮ ಜರುಗಿಸಿರುವ ರಾಜ್ಯ ಸರ್ಕಾರವು, ಈಗ ತಮಿಳುನಾಡು ಮಾದರಿಯಲ್ಲೇ ಪಾತಕಲೋಕದಲ್ಲಿ ಲಾಂಗು, ಮಚ್ಚುಗಳ ಸದ್ದು ಅಡಗಿಸಲು ಮುಂದಾಗಿದೆ. ಹಲವು ದಿನಗಳಿಂದ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಗೆ ತಿದ್ದುಪಡಿ ತರುವಂತೆ ಪೊಲೀಸರ ಮನವಿಗೆ ಪುರಸ್ಕರಿಸಿರುವ ಸರ್ಕಾರವು, ಎರಡೂವರೆ ಅಡಿಗಿಂತ ಉದ್ದದ ಯಾವುದೇ ಅಸ್ತ್ರ ಬಳಸಿದರೂ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ
ಆದೇಶಿಸಿದೆ. ಆದರೆ, ಇದು ಅಪರಾಧ ಚಟುವಟಿಕೆಗಳಿಗೆ ಮಾತ್ರ ಕಾಯ್ದೆ ಅನ್ವಯವಾಗುತ್ತದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಇದರೊಂದಿಗೆ ಪಿಸ್ತೂಲ್ ಮಾತ್ರವಲ್ಲದ  ಲಾಂಗು, ಮಚ್ಚುಗಳನ್ನು ಹೊಂದಿದ್ದರೂ ರೌಡಿಗಳಿಗೆ ಕುತ್ತು ಬರಲಿದೆ. ಈ ಆದೇಶ ಬೆನ್ನಲ್ಲೆ ರೌಡಿಗಳ ವಿರುದ್ಧ ಪೊಲೀಸರು ಗದಾ ಪ್ರಹಾರ ನಡೆಸಿದ್ದಾರೆ. ಬೆಂಗಳೂರು ನಗರದಲ್ಲಿ ತಿಂಗಳ ಅವಧಿಯಲ್ಲಿ 10 ಕ್ಕೂ ಹೆಚ್ಚು ರೌಡಿಗಳ ವಿರುದ್ಧ ಹೊಸ ಕಾಯ್ದೆಯನ್ವಯ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮೊದಲಿನಿಂದಲೂ ರಾಜ್ಯದ ಪಾತಕಲೋಕದಲ್ಲಿ ಲಾಂಗು ಮಚ್ಚುಗಳೇ ಹೆಚ್ಚಿನ ಸದ್ದು ಮಾಡುತ್ತವೆ. ಜನರನ್ನು ಭಯ ಭೀತಿಗೊಳಿಸಲು ಆ ಶಸ್ತ್ರಗಳನ್ನು ರೌಡಿಶೀಟರ್‌ಗಳು ಬಳಸುತ್ತಾರೆ. ಆದರೆ  ಕರಾವಳಿ ಹಾಗೂ ಉತ್ತರ ಕರ್ನಾಟಕದ ಕೆಲವು ಕಡೆ ಪಿಸ್ತೂಲ್’ಗಳು ಅರ್ಭಟಿಸುತ್ತವೆ. ಹೀಗಿದ್ದರೂ ಅಪರಾಧ ಕೃತ್ಯಗಳಲ್ಲಿ ಅಧಿಕವಾಗಿ ಲಾಂಗುಗಳೇ ಬಳಕೆಯಾಗುತ್ತವೆ. ಈ ವಿಚಾರ ಗಂಭೀರವಾಗಿ ತೆಗೆದುಕೊಂಡು ಆ ಶಸ್ತ್ರಗಳ ವಿರುದ್ಧವೂ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸುವ ಬಗ್ಗೆ
ಚಿಂತನೆ ನಡೆಸಲಾಯಿತು ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಪರವಾನಗಿ ಇಲ್ಲದ ಪಿಸ್ತೂಲ್ ಅಥವಾ ರಿವಾಲ್ವರ್ ಹೊಂದಿದ್ದರೆ ಅಂತಹವರ ವಿರುದ್ಧ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುತ್ತಿತ್ತು. ಇದರಿಂದ ಸುಲಭವಾಗಿ ಆರೋಪಿಗಳಿಗೆ ನ್ಯಾಯಾಲಯದಲ್ಲಿ ಜಾಮೀನು ಸಿಗುತ್ತಿರಲಿಲ್ಲ.
ಇದನ್ನು ಮನಗಂಡ ತಮಿಳುನಾಡು ಸರ್ಕಾರವು, ಲಾಂಗು ಮಚ್ಚುಗಳನ್ನು ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಗೆ ವ್ಯಾಪ್ತಿಗೆ ಸೇರಿಸಿತು. ಪಕ್ಕದ ರಾಜ್ಯದ ತಿದ್ದುಪಡಿ ಬಗ್ಗೆ ಮಾಹಿತಿ ಆಧರಿಸಿ, ರಾಜ್ಯದಲ್ಲಿ ಸಹ ಅದೇ ಮಾದರಿಯ ನೀತಿಯನ್ನು ಜಾರಿಗೊಳಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ. 

-ಗಿರೀಶ್ ಮಾದೇನಹಳ್ಳಿ

loader