ಹೊಳೆನರಸೀಪುರ[ಜು.16]: ರಾಜ್ಯ ರಾಜಕಾರಣದ ಈ ಸ್ಥಿತಿಗೆ ಎಚ್‌.ಡಿ. ರೇವಣ್ಣ ಅವರೇ ಕಾರಣರಾಗಿದ್ದು ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದಲ್ಲಿ ನಾವೆಲ್ಲಾ ವಾಪಸ್‌ ಬರುತ್ತೇವೆ ಎಂದು ಅತೃಪ್ತ ಶಾಸಕರು ಒಂದು ಹೇಳಿಕೆ ನೀಡಲಿ. ನಾನೇ ಖುದ್ದಾಗಿ ಸಚಿವ ರೇವಣ್ಣ ಅವರ ರಾಜೀನಾಮೆಗೆ ಮನವೊಲಿಸುತ್ತೇನೆ ಎಂದು ಅರಕಲಗೂಡು ಜೆಡಿಎಸ್‌ ಶಾಸಕ ಎ.ಟಿ. ರಾಮಸ್ವಾಮಿ ತಿಳಿಸಿದ್ದಾರೆ.

ತಾಲೂಕಿನ ಹಳ್ಳಿಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಸರ್ಕಾರದಲ್ಲಿ ನ್ಯೂನತೆಗಳು ಮತ್ತು ಸಣ್ಣಪುಟ್ಟಅಸಮಾಧಾನಗಳು ಇಲ್ಲವೆಂದಲ್ಲ. ಆದರೆ ರಾಜಕೀಯ ವರಿಷ್ಠರ ಜೊತೆಗಿರುವ ಹೊಗಳುಭಟ್ಟಶಾಸಕರಿಂದಲೇ ಇಂದು ರಾಜ್ಯ ರಾಜಕಾರಣ ಈ ಸ್ಥಿತಿಗೆ ಬಂದಿದೆ ಎಂದು ಟೀಕಿಸಿದರು.

ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಆಂಜನೇಯನ ಎದೆಬಗೆದರೆ ರಾಮಾ ರಾಮಾ ಎನ್ನುವ ಹಾಗೆ ತಮ್ಮ ಎದೆ ಬಗೆದರೆ ಸಿದ್ದರಾಮಣ್ಣ ಸಿದ್ದರಾಮಣ್ಣ ಎನ್ನುತ್ತಿದ್ದ ಎಂಟಿಬಿ ನಾಗರಾಜ್‌ ಏನಾದರು? ಸಿದ್ದರಾಮಯ್ಯ ನಮ್ಮ ಪಾಲಿಗೆ ಆನೆ ಇದ್ದಂತೆ ಎನ್ನುತ್ತಿದ್ದ ಸೋಮಶೇಖರ್‌ ಎಲ್ಲಿ ಹೋದರು ಎಂದು ವ್ಯಂಗ್ಯವಾಡಿದರು.