ಗೌರಿ ಲಂಕೇಶ್‌ಗೆ ನೀಡಿದ ಸರಕಾರಿ ಗೌರವ ಯೋಧನಿಗೇಕಿಲ್ಲ?

If Guari Lankesh was given state funeral why not to a soldier
Highlights

'ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅಂತ್ಯ ಸಂಸ್ಕಾರದ ವೇಳೆ ನೀಡಿದ ಸಕಲ ಸರಕಾರಿ ಗೌರವ, ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ ಯೋಧನಿಗೇಕಿಲ್ಲ?' ಎಂದು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಅವರು ಸಿಎಂ ಸಿದ್ದರಾಮಯ್ಯ ಮತ್ತು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಪ್ರಶ್ನಿಸಿದ್ದಾರೆ.

ಬೆಂಗಳೂರು:' ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅಂತ್ಯ ಸಂಸ್ಕಾರದ ವೇಳೆ ನೀಡಿದ ಸಕಲ ಸರಕಾರಿ ಗೌರವ, ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ ಯೋಧನಿಗೇಕಿಲ್ಲ?' ಎಂದು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಅವರು ಸಿಎಂ ಸಿದ್ದರಾಮಯ್ಯ ಮತ್ತು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಪ್ರಶ್ನಿಸಿದ್ದಾರೆ.

ಹೃದಯಾಘಾತದಿಂದ ಅಸುನೀಗಿದ ನಿವೃತ್ತ ಕರ್ನಲ್ ಎಂ.ಬಿ.ರವೀಂದ್ರನಾಥ್ ಅವರಿಗೆ ಸಕಲ ಸರಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನೆರವೇರಿಸಬೇಕೆಂದು ಸಿದ್ದರಾಮಯ್ಯ ಅವರನ್ನು ಟ್ವೀಟ್ ಮಾಡಿ, ಸಂಸದರು ಆಗ್ರಹಿಸಿದ್ದರು. ಮಿಲಿಟರಿ ಗೌರವಗಳೊಂದಿಗೆ ರವೀಂದ್ರನಾಥ್ ಅವರ ಅಂತ್ಯಸಂಸ್ಕಾರ ಸ್ವಗ್ರಾಮ ಹೊಳೆಸಿರಗೆರೆಯಲ್ಲಿ ಏ.9ರಂದು ನಡೆಯಿತು.

‘ಸಿದ್ದರಾಮಯ್ಯ ನಾಚಿಕೆಗೆಟ್ಟ ಬೂಟಾಟಿಕೆಯ ರಾಜಕಾರಣಿ. ದೇಶಕ್ಕಾಗಿ ಹೋರಾಡಿದ ಕನ್ನಡಿಗ ಯೋಧ ಮೃತಪಟ್ಟಾಗಲೂ ಕಾಳಜಿ ತೋರಲಿಲ್ಲ. ರಾಹುಲ್​ಗಾಂಧಿ ಜತೆ ಜಾತಿ, ಜಾತಿಗಳನ್ನು ಒಡೆದು ಆಳುವ ರಾಜಕೀಯದಲ್ಲಿ ಬ್ಯುಸಿಯಾಗಿದ್ದಾರೆ,’ ಎಂದು ರಾಜೀವ್ ಕಿಡಿಕಾರಿದ್ದಾರೆ.

ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ, ಕಾರ್ಗಿಲ್ ಯುದ್ಧದಲ್ಲಿ ಮುಂಚೂಣಿಯಲ್ಲಿದ್ದ ರವೀಂದ್ರನಾಥ್ ಸೇವಾವಧಿ ಮುಗಿದ ನಂತರವೂ ಸೇನಾ ಸೇವೆಗೆ ಸೇರಿಕೊಂಡಿದ್ದರು. ಈಗ್ಗೆ ಆರು ತಿಂಗಳ ಹಿಂದೆಯಷ್ಟೇ ನಿವೃತ್ತಿಯಾಗಿದ್ದರು.

 


 

loader