ಸರ್ಕಾರಿ ನೌಕರರಿಗೆ ನೀಡಲಾಗುವ ಬಡ್ತಿಯಲ್ಲಿ ಮೀಸಲಾತಿಗೆ ಮುಂದಾಗಿರುವ ರಾಜ್ಯ ಸರ್ಕಾರದ ವಿರುದ್ಧ ರಾಜ್ಯ ಒಕ್ಕಲಿಗರ ಸಂಘ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಬೆಂಗಳೂರು (ಅ.06): ಸರ್ಕಾರಿ ನೌಕರರಿಗೆ ನೀಡಲಾಗುವ ಬಡ್ತಿಯಲ್ಲಿ ಮೀಸಲಾತಿಗೆ ಮುಂದಾಗಿರುವ ರಾಜ್ಯ ಸರ್ಕಾರದ ವಿರುದ್ಧ ರಾಜ್ಯ ಒಕ್ಕಲಿಗರ ಸಂಘ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಪಂ.ಜಾ ಹಾಗೂ ಪಂ.ವರ್ಗದ ನೌಕರರಿಗೆ ಕಲ್ಪಿಸಿರುವ ಬಡ್ತಿ ಮೀಸಲಾತಿ ಮತ್ತು ಜೇಷ್ಠತೆ ನೀಡುವುದರಿಂದ ಉಳಿದ ವರ್ಗದ ನೌಕರರಿಗೆ ಅನ್ಯಾಯವಾಗುತ್ತದೆ.ಶೇ.18 ರಷ್ಟು ಪಂ.ಜಾ ಹಾಗೂ ಪಂ.ವರ್ಗಕ್ಕೆ ಮೀಸಲಾತಿ ಕಲ್ಪಿಸಲಾಗಿದೆ.ಇದರಿಂದ 82 ವರ್ಗದ ನೌಕರರಿಗೆ ಬಡ್ತಿ ಅವಕಾಶ ವಂಚಿತವಾಗುತ್ತದೆ.ಈ ಸಂಬಂಧ ನೌಕರರ, ಅಧಿಕಾರಿಗಳ ಮಧ್ಯೆ ಅಸಮಾನತೆಗೆ ಕಾರಣವಾಗುತ್ತದೆ ಅಂತಾ ರಾಜ್ಯ ಒಕ್ಕಲಿಗರ ಸಂಘದ ರಾಜ್ಯಾಧ್ಯಕ್ಷ ಡಿ.ಎನ್.ಬೆಟ್ಟೆಗೌಡ ದೂರಿದ್ದಾರೆ.

ಒಕ್ಕಲಿಗರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2017ರ ಫೆಬ್ರುವರಿಯಲ್ಲಿ ಸುಪ್ರೀಂಕೋರ್ಟ್ ಪಂ.ಜಾ ಹಾಗೂ ಪಂ.ವರ್ಗದ ನೌಕರರಿಗೆ ಜೇಷ್ಠತೆ ನೀಡುವ ಕಾಯ್ದೆಯನ್ನು ರದ್ದುಗೊಳಿಸಿತು. ಎಲ್ಲಾ ವೃಂದದ, ಇಲಾಖೆ ನೌಕರರ ಜೇಷ್ಠತಾ ಪಟ್ಟಿಯನ್ನು ಮೂರು ತಿಂಗಳಲ್ಲಿ ಪರಿಷ್ಕರಿಸುವಂತೆ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ನ್ಯಾಯಾಲಯದ ಆದೇಶವನ್ನು ಪರಿಗಣಸಿದೆ ಸರ್ಕಾರ ವಿಶೇಷ ಅಧಿವೇಶನ ನಡೆಸಿ ಜೇಷ್ಠತೆ ನೀಡುವ ಕಾಯ್ದೆ ಜಾರಿಗೆ ಮುಂದಾಗಿದೆ.ಇದರಿಂದ ರಾಜ್ಯದ 6 ಲಕ್ಷ ಸರ್ಕಾರಿ ನೌಕರರಿಗೆ ಅನ್ಯಾಯವಾಗಲಿದೆ ಅಂತಾ ಹೇಳಿದರು.ಈ ಸಂಬಂಧ ಅಕ್ಟೋಬರ್ 30 ರಂದು ಅರಮನೆ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಸಲು ನಿರ್ಧರಿಸಲಾಗಿದ್ದು, ಪ್ರೀಡಂ ಪಾರ್ಕ್ ನಿಂದ ರ್ಯಾಲಿ ಮೂಲಕ ಸಮಾವೇಶಕ್ಕೆ ಚಾಲನೆ ನೀಡಲಾಗುತ್ತದೆ.ಇಷ್ಟಾದ್ರೂ ಸರ್ಕಾರ ಬಡ್ತಿ ಮೀಸಲಾತಿಗೆ ಮುಂದಾದರೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತೆ ಅಂತಾ ಬೆಟ್ಟೆಗೌಡರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.