ಮೋದಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯೊಂದನ್ನು ರದ್ದು ಮಾಡುವುದಾಗಿ ಕಾಂಗ್ರೆಸ್ ಮುಖಂಡರು ಹೇಳಿದ್ದಾರೆ. 

ಮುಂಬೈ: ಬಹುನಿರೀಕ್ಷಿತ ಅಹಮದಾಬಾದ್‌-ಮುಂಬೈ ಬುಲೆಟ್‌ ರೈಲು ಆರ್ಥಿಕವಾಗಿ ಕಾರ್ಯಸಾಧುವಲ್ಲ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಯೋಜನೆಯನ್ನು ರದ್ದುಪಡಿಸುವುದಾಗಿ ಮಹಾರಾಷ್ಟ್ರದ ಮಾಜಿ ಸಿಎಂ ಪೃಥ್ವಿರಾಜ್‌ ಚೌಹಾಣ್‌ ಹೇಳಿದ್ದಾರೆ.

ಬುಲೆಟ್‌ ರೈಲು ಯೋಜನೆಗೆ 250 ಕೋಟಿ ರು. ಹೆಚ್ಚುವರಿ ರಾಜ್ಯದ ಪಾಲು ನೀಡುವುದಕ್ಕೆ ವಿಧಾನಸಭಾ ಅಧಿವೇಶನದಲ್ಲಿ ಕಾಂಗ್ರೆಸ್‌ ವಿರೋಧ ವ್ಯಕ್ತಪಡಿಸಿತ್ತು. ಆದರೆ, ವಿರೋಧದ ನಡುವೆಯೂ ವಿಧಾನಸಭೆಯಲ್ಲಿ ಪ್ರಸ್ತಾಪ ಮಂಜೂರಾಗಿದೆ.

ಜಪಾನ್‌ ಪ್ರಧಾನಿ ಶಿಂಜೊ ಅಬೆ ಮತ್ತು ಪ್ರಧಾನಿ ಮೋದಿಯವರ ರಾಜಕೀಯ ಲಾಭಕ್ಕಾಗಿ ಈ ಒಪ್ಪಂದ ಮಾಡಲಾಗಿದೆ. ಒಪ್ಪಂದಕ್ಕಾಗಿ ಅಬೆ ಭಾರತ ಪ್ರವಾಸ ಕೈಗೊಂಡಿದ್ದುದು ನಿಗದಿತವಾಗಿರಲಿಲ್ಲ. ಒಪ್ಪಂದಕ್ಕೆ ಸಹಿ ಹಾಕುವಾಗ ಅಬೆ ಜಪಾನ್‌ನಲ್ಲಿ ಮತ್ತು ಮೋದಿ ಗುಜರಾತ್‌ನಲ್ಲಿ ಚುನಾವಣೆ ಎದುರಿಸುತ್ತಿದ್ದರು ಎಂದು ಚವಾಣ್‌ ಆಪಾದಿಸಿದ್ದಾರೆ.