ಕೊಳ್ಳೇಗಾಲ[ಜು.14]: ಸಮ್ಮಿಶ್ರ ಸರ್ಕಾರಕ್ಕೆ ಹೊರಗಿನಿಂದ ವಿಷಯಾಧಾರಿತ ಬೆಂಬಲ ನೀಡಿದ್ದೇನೆ. ಬಿಜೆಪಿಯವರಿಗೆ ನಾನು ಬೆಂಬಲ ನೀಡಬೇಕಾದರೆ ಬಿಎಸ್ಪಿ ಹೈಕಮಾಂಡ್‌ ನಿರ್ಣಯವೇ ಅಂತಿಮ ಎಂದು ಮಾಜಿ ಸಚಿವ ಹಾಗೂ ಶಾಸಕ ಎನ್‌. ಮಹೇಶ್‌ ಹೇಳಿದರು.

ಸಮ್ಮಿಶ್ರ ಸರ್ಕಾರಕ್ಕೆ ಹೊರಗಿನಿಂದ ವಿಷಯಾಧಾರಿತ ಬೆಂಬಲ ನೀಡಿದ್ದೇನೆ. ಇದು ಹೈಕಮಾಂಡ್‌ ನಿರ್ಧಾರ ಕೂಡ. ಬಿಜೆಪಿಗೆ ಬೆಂಬಲ ನೀಡುವ ತೀರ್ಮಾನ ಕೈಗೊಳ್ಳುವುದು ಅದು ಹೈಕಮಾಂಡ್‌ಗೆ ಬಿಟ್ಟ ಚಾರವಾಗಿದೆ. ಶಾಸಕರು ಸಮ್ಮಿಶ್ರ ಸರ್ಕಾರದ ವಿರುದ್ಧ ಅತೃಪ್ತಿಗೊಂಡು ಮುಂಬೈಗೆ ತೆರಳಿರುವುದು ಹಾಗೂ ಪ್ರಸಕ್ತ ವಿದ್ಯಮಾನ ನಿಜಕ್ಕೂ ದುರಾದಷ್ಟಕರ. ಕೂಡಲೆ ಸುಪ್ರಿಂ ಕೋರ್ಟ್‌ ಹಾಗೂ ಸ್ವೀಕರ್‌ ಈ ಪ್ರಕರಣವನ್ನು ಶೀಘ್ರದಲ್ಲೆ ಬಗೆಹರಿಸಿ ಸೌಹಾರ್ದಯುತ ವಾತಾವರಣ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಮುಂದಾಗಬೇಕು. ಈ ಬೆಳವಣಿಗೆ ನಿಜಕ್ಕೂ ವಿಷಾದನೀಯ ಎಂದರು.

ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಬಿಎಸ್‌ಪಿ ಪಕ್ಷದ ಮುಖ್ಯಸ್ಥೆ ಮಾಯಾವತಿ ಏನಂತಾರೆ? ಬಿಜೆಪಿಗೆ ಬೆಂಬಲ ನೀಡ್ತಾರಾ? ಅಥವಾ ಸುಮ್ಮನಾಗ್ತಾರಾ? ಕಾದು ನೋಡಬೇಕಷ್ಟೇ