ಗೋಮಾಂಸ ಇದ್ರೆ ಮೌಲ್ವಿಗಳು ನಿಖಾ ಮಾಡಿಸಲ್ವಂತೆ!

First Published 31, Jan 2018, 10:24 AM IST
If Beef in Marriage Moulivis do not Allowed to Nikha
Highlights

ಗೋವುಗಳ ಸಾಗಾಟಗಾರರು ಮತ್ತು ಗೋರಕ್ಷಕರ ನಡುವಿನ ಕಿತ್ತಾಟದಿಂದ ಇತ್ತೀಚಿನ ದಿನಗಳಲ್ಲಿ ಬಹು ಚರ್ಚೆಯಲ್ಲಿರುವ ಚಂಡೀಗಢದಲ್ಲಿ, ಕೋಮುಸೌಹಾರ್ಧ ಕಾಪಾಡಲು, ಸ್ಥಳೀಯ ಮೌಲ್ವಿಗಳು ಹೊಸ ನಿರ್ಧಾರ ಕೈಗೊಂಡಿದ್ದಾರೆ.

ಚಂಡೀಗಢ (ಜ.31): ಗೋವುಗಳ ಸಾಗಾಟಗಾರರು ಮತ್ತು ಗೋರಕ್ಷಕರ ನಡುವಿನ ಕಿತ್ತಾಟದಿಂದ ಇತ್ತೀಚಿನ ದಿನಗಳಲ್ಲಿ ಬಹು ಚರ್ಚೆಯಲ್ಲಿರುವ ಚಂಡೀಗಢದಲ್ಲಿ, ಕೋಮುಸೌಹಾರ್ಧ ಕಾಪಾಡಲು, ಸ್ಥಳೀಯ ಮೌಲ್ವಿಗಳು ಹೊಸ ನಿರ್ಧಾರ ಕೈಗೊಂಡಿದ್ದಾರೆ.

ಇದರನ್ವಯ, ಇನ್ನು ಮುಂದೆ ನಿಖಾ (ವಿವಾಹ) ಔತಣದಲ್ಲಿ ಗೋಮಾಂಸದ ಅಡುಗೆ ಇರುವುದಿಲ್ಲ ಎಂದು ವಧು-ವರನ ಕಡೆಯವರು ಖಚಿತಪಡಿಸಿದ ಮೇಲಷ್ಟೇ ಮೌಲ್ವಿಗಳು ನಿಖಾ ಮಾಡಿಸುತ್ತಾರಂತೆ. ನುಹ್, ರಿವಾರಿ, ಪಲ್ವಾಲ್, ಫರೀದಾದಾಬಾದ್ ಪ್ರದೇಶದ ಮೌಲ್ವಿಗಳು ಇಂಥದ್ದೊಂದು ನಿರ್ಧಾರ  ಕೈಗೊಂಡಿದ್ದಾರೆ.

 

loader