ಮಹಾತ್ಮ ಗಾಂಧೀಜಿಯವರ ಜನ್ಮದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿ ರಾಜ್’ಘಾಟ್’ಗೆ ತೆರಳಿ ಪುಷ್ಪ ನಮನ ಸಲ್ಲಿಸಿದರು.

ನವದೆಹಲಿ (ಅ.02): ಮಹಾತ್ಮ ಗಾಂಧೀಜಿಯವರ ಜನ್ಮದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿ ರಾಜ್’ಘಾಟ್’ಗೆ ತೆರಳಿ ಪುಷ್ಪ ನಮನ ಸಲ್ಲಿಸಿದರು.

Add Asianetnews Kannada as a Preferred SourcegooglePreferred

ಬಾಪುರವರ ಜನ್ಮದಿನವಾದ ಇಂದು ನಾನವರಿಗೆ ತಲೆ ಬಾಗುತ್ತೇನೆ. ಅವರ ಉದಾತ್ತ ಆದರ್ಶಗಳು ಜಗತ್ತಿಗೆ ಪ್ರೇರೇಪಣೆ ನೀಡುತ್ತವೆ ಎಂದು ಮೋದಿ ಹೇಳಿದರು. ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ರಾಜ್’ಘಾಟ್’ಗೆ ತೆರಳಿ ಪುಷ್ಪ ನಮನ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ಸ್ವಚ್ಚ ಭಾರತದ ಬಗ್ಗೆ ಮಾತನಾಡುತ್ತಾ, ಸ್ವಚ್ಚ ಭಾರತವು 125 ಕೋಟಿ ಭಾರತೀಯರ ಅಭಿಯಾನ. ಇದು ಕೇವಲ ಅಧಿಕಾರಿಗಳ, ನಾಯಕರ ಅಭಿಯಾನವಲ್ಲ ಎಂದು ಮೋದಿ ಹೇಳಿದರು.

ಭಾರತ ಸಮಸ್ಯೆಗಳನ್ನು ಎದುರಿಸುತ್ತಿದೆ. ಹಾಗಂತ ನಾವು ಇದರಿಂದ ದೂರ ಓಡಿ ಹೋಗಲು ಆಗುವುದಿಲ್ಲ. ಅದನ್ನು ಎದುರಿಸಿ ಅದರಿಂದ ಹೊರ ಬರಲು ಕೆಲಸ ಮಾಡುತ್ತೇವೆ. ಸ್ವಚ್ಚ ಭಾರತಕ್ಕೆ ಎಲ್ಲರೂ ಕೈ ಜೋಡಿಸಬೇಕು. 1 ಸಾವಿರ ಮಹಾತ್ಮ ಗಾಂಧೀಜಿಯವರಿಂದ , 1 ಲಕ್ಷ ನರೇಂದ್ರ ಮೋದಿಯಿಂದ, ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಂದ ಮಾತ್ರ ಸಾಧ್ಯವಾಗುವುದಿಲ್ಲ. 125 ಕೋಟಿ ಭಾರತೀಯರಿಂದ ಮಾತ್ರ ಸಾಧ್ಯ ಎಂದು ಮೋದಿ ಹೇಳಿದರು.