ನವದೆಹಲಿ(ಫೆ.28): ದೇಶ ಕರೆದಾಗ ಇಲ್ಲ ಅನ್ನೋ ಒಬ್ಬೇ ಒಬ್ಬ ಭಾರತೀಯ ಈ ನೆಲದಲ್ಲಿ ಹುಟ್ಟಿಲ್ಲ. ಅದರಂತೆ ಭಾರತ-ಪಾಕ್ ನಡುವಿನ ಈ ಯುದ್ಧದ ಕಾರ್ಮೋಡ ದೇಶದ ಪ್ರತಿಯೊಬ್ಬ ನಾಗರೀಕನನ್ನೂ ದೇಶಸೇವೆಗಾಗಿ ಸಜ್ಜುಗೊಳಿಸುತ್ತಿದೆ.

ಪಾಕಿಸ್ತಾನ ಮತ್ತು ಭಾರತ ನಡುವೆ ಯುದ್ಧದ ಕಾರ್ಮೋಡ ಹರಡಿರುವ ಬೆನ್ನಲ್ಲೇ, ಅವಶ್ಯವಿದ್ದರೆ ನಾವೂ ಯುದ್ಧ ವಿಮಾನವನ್ನು ಹಾರಿಸುತ್ತೇವೆ ಎಂದು ಖಾಸಗಿ ವಿಮಾನಯಾನ ಸಂಸ್ಥೆಯ ಪೈಲೆಟ್ ಗಳು ಹೇಳಿದ್ದಾರೆ.

ಪಾಕಿಸ್ತಾನ ಜತೆ ಯುದ್ಧ ಮಾಡುವುದಾದರೆ ನಾವೂ ಭಾರತೀಯ ವಾಯುಸೇನೆಯ ಯುದ್ಧ ವಿಮಾನಗಳನ್ನು ಉಡಾವಣೆ ಮಾಡುತ್ತೇವೆ ಎಂದು ಭಾರತೀಯ ವಾಯುಸೇನೆ ಹಾಗೂ ಕೇಂದ್ರ ಸರ್ಕಾರಕ್ಕೆ ಭಾರತೀಯ ವಾಣಿಜ್ಯ ಪೈಲಟ್ಸ್ ಅಸೋಸಿಯೇಷನ್(ಐಸಿಪಿಎ) ಹೇಳಿದೆ.

ಐಸಿಪಿಎಯ ಈ ಹೇಳಿಕೆಯಿಂದಾಗಿ ಭಾರತೀಯ ವಾಯುಸೇನೆಗೆ ಆನೆಬಲ ಬಂದಂತಾಗಿದೆ. ಅಲ್ಲದೇ ದೇಶಸೇವೆಗೆ ಸಿದ್ಧ ಎಂದ ಖಾಸಗಿ ಪೈಲೆಟ್ ಗಳಿಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.