ಮುಂಬೈ[ಮೇ.29]: ಸೂರತ್ ನ ಐಸ್ ಕ್ರೀಂ ಪಾರ್ಲರ್ ಒಂದು ಬಿಜೆಪಿ ಗೆಲುವನ್ನು ವಿಶೇಷವಾಗಿ ಸಂಭ್ರಮಿಸುತ್ತಿದೆ. ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾದ ಹಾಗೂ ಬಿಜೆಪಿ ಐತಿಹಾಸಿಕ ಜಯ ಗಳಿಸಿದ್ದ ಹಿನ್ನೆಲೆಯಲ್ಲಿ ಐಸ್ ಕ್ರಿಂ ಪಾರ್ಲರ್ ಮಾಲೀಕ ವಿವೇಕ್ ಅಜ್ಮೇರಾ ಮೋದಿ ಮುಖವಿರುವ ವಿಭಿನ್ನ ಐಸ್ ಕ್ರೀಂ ತಯಾರಿಸಿದ್ದು, ಇದನ್ನು 'ನರೇಂದ್ರ ಮೋದಿ ಸೀತಾಫಲ್ ಕುಲ್ಫೀ' ಎಂಬ ಹೆಸರಿಟ್ಟಿದ್ದಾರೆ.

ಇನ್ನು 'ನರೇಂದ್ರ ಮೋದಿ ಸೀತಾಫಲ್ ಕುಲ್ಫೀಯಲ್ಲಿ ಮಾಡಲಾದ ಮೋದಿ ಪೋಟೋ ಯವುದೇ ಮಷೀನ್ ನಿಂದ ತಯರಿಸಿಲ್ಲ, ಕೈಯ್ಯಲಲ್ಲೇ ಮೂಡಿಸಿರುವ ಆಕೃತಿ ಎಂಬುವುದೇ ವಿಶೇಷ. ಐಸ್ ಕ್ರೀಂ ಪಾರ್ಲರ್ ನ ಉದ್ಯೋಗಿಗಳು 24 ಗಂಟೆಯಲ್ಲಿ 200 'ನರೇಂದ್ರ ಮೋದಿ ಸೀತಾಫಲ್ ಕುಲ್ಫೀ' ತಯಾರಿಸಿದ್ದಾರೆ.

ಈ ಸ್ಪೆಷಲ್ ಕುಲ್ಫೀ ಮೇ 30ರವರೆಗೆ ಲಭ್ಯವಿದೆ. ಈ ಕುಲ್ಫೀ ಕುರಿತಾಗಿ ಪ್ರತಿಕ್ರಿಯಿಸಿರುವ ಪಾರ್ಲರ್ ಮಾಲೀಕ 'ನರೇಂದ್ರ ಮೋದಿ ಸೀತಾಫಲ್ ಕುಲ್ಫೀ'ಗೆ ಭಾರೀ ಬೇಡಿಕೆ ಇದೆ. ಇದು ಶೇ. 100ರಷ್ಟು ನೈಸರ್ಗಿಕವಾಗಿ ತಯಾರಿಸಲಾಗಿದ್ದು, ಯಾವುದೇ ಅಸೆನ್ಸ್ ಬಳಸಿಲ್ಲ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದ ಬಳಿಕ ಖರೀದಿದಾರರಿಗೆ ಶೇ. 50ರಷ್ಟು ಡಿಸ್ಕೌಂಟ್ ನಿಡಲಾಗಿದೆ' ಎಂದಿದ್ದಾರೆ