ಸುದೀರ್ಘ ರಜೆಯಲ್ಲಿದ್ದಾರೆ ಐಎಎಸ್ ಅಧಿಕಾರಿ ರಶ್ಮಿ ಮಹೇಶ್; ಕಾರಣವೇನು?

First Published 15, Mar 2018, 3:20 PM IST
IAS Officer Rashmi Mahesh in Long Leave
Highlights

ಐಎಎಸ್ ಅಧಿಕಾರಿ ರಶ್ಮಿ  ಮಹೇಶ್ ಸುದೀರ್ಘ ರಜೆಯಲ್ಲಿದ್ದಾರೆ. 

ಬೆಂಗಳೂರು (ಮಾ. 15): ಐಎಎಸ್ ಅಧಿಕಾರಿ ರಶ್ಮಿ  ಮಹೇಶ್ ಸುದೀರ್ಘ ರಜೆಯಲ್ಲಿದ್ದಾರೆ. 

ಕಳೆದ ಒಂದೂವರೆ  ವರ್ಷದಿಂದ ಕರ್ತವ್ಯಕ್ಕೆ ಹಾಜರಾಗದೇ ರಜೆಯಲ್ಲಿರುವ ರಶ್ಮೀ ಮಹೇಶ್ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ.  ಜೆಪಿ ನಗರ 7 ನೇ ಕ್ರಾಸ್ 7 ನೇ ಹಂತದಲ್ಲಿ ಇರುವ  ಬ್ರಿಗ್ರೇಡ್ ಪಾಮ್ ಸ್ಪ್ರಿಂಗ್ಸ್ ಅಪಾರ್ಟ್’ನಲ್ಲಿ ವಾಸವಾಗಿದ್ದಾರೆ.  ಅರ್ಪಾಟ್ಮೆಂಟ್ ನ ಭದ್ರತಾ ಸಿಬ್ಬಂದಿ ಕೂಡ ಅವರ ವಾಸದ ಬಗ್ಗೆ ಮಾಹಿತಿಯನ್ನು  ನೀಡುತ್ತಿಲ್ಲ. ಇದೇ ಅಪಾರ್ಟ್’ಮೆಂಟ್’ನಲ್ಲಿ  ರಶ್ಮೀ ಮಹೇಶ್ ತಂಗಿ ವಾಸವಾಗಿದ್ದಾರೆ.

ತಾವು ಕೆಲಸ ಮಾಡಿದ ಇಲಾಖೆಗಳಲ್ಲಿ ನಡೆಯುತ್ತಿದ್ದ ಅಕ್ರಮಗಳನ್ನು ಯಾವುದೇ ಮುಲಾಜಿಲ್ಲದೇ ಬಯಲಿಗೆಳೆದಿದ್ದರು. ಈ ಕಾರಣಕ್ಕೆ ಪದೇಪದೆ ಅವರನ್ನು ವರ್ಗಾವಣೆ ಮಾಡಲಾಗುತ್ತಿತ್ತು.  ಪಿಯು ಮಂಡಳಿಯಲ್ಲಿ ನಿರ್ದೇಶಕರಾಗಿದ್ದಾಗ ಮಂಡಳಿಯ ಅಕ್ರಮಗಳನ್ನು  ಬಹಿರಂಗಪಡಿಸಿದ್ದರು. ನಂತರ ವೈದ್ಯಕೀಯ ಶಿಕ್ಷಣ ಇಲಾಖೆ ಕಾರ್ಯದರ್ಶಿಯಾಗಿ ಖಾಸಗಿ ವೈದ್ಯಕೀಯ ಮತ್ತು ದಂತ  ವೈದ್ಯಕೀಯ ಕಾಲೇಜುಗಳ ಮೇಲೆ ತಿರುಗಿಬಿದ್ದಿದ್ದರು. ಈ ಕಾರಣಕ್ಕಾಗಿ ಅವರನ್ನು ರಜೆ ಮೇಲೆ ಕಳುಹಿಸಿ ನಂತರ ಮೈಸೂರಿನ ಆಡಳಿತ ಮತ್ತು ತರಬೇತಿ ಕೇಂದ್ರದ ಆಯಕ್ತರಾಗಿ ವರ್ಗ ಮಾಡಲಾಗಿತ್ತು.

ಅಲ್ಲಿಯೂ ತರಬೇತಿ ಕೇಂದ್ರದಲ್ಲಿ ಸುಮಾರು 100 ಕೋಟಿ ರೂ. ಹಗರಣ ಬೆಳಕಿಗೆ ತಂದಿದ್ದರು. ಈ ಕಾರಣಕ್ಕಾಗಿ ಅವರ ಮೇಲೆ ಹಲ್ಲೆಯೂ ನಡೆದಿತ್ತು. ಅದಾದ ಬಳಿಕ ಅವರನ್ನು ಆಹಾರ ಸಂಸ್ಕರಣೆ ಮತ್ತು ಕೊಯ್ಲೋತ್ತರ ತಂತ್ರಜ್ಞಾನ ಇಲಾಖೆಗೆ ವರ್ಗಾಯಿಸಲಾಯಿತು. ಕೆಲವೇ ದಿನಗಳಲ್ಲಿ ಬಿಬಿಎಂಪಿ ಹಣಕಾಸು ಮತ್ತು ಜಾಹೀರಾತು ವಿಭಾಗದ ಮುಖ್ಯಾಧಿಕಾರಿಯಾಗಿ ಮತ್ತೆ ವರ್ಗ ಮಾಡಲಾಗಿತ್ತು.

 

loader