Asianet Suvarna News Asianet Suvarna News

ಸ್ವಿಮ್ಮಿಂಗ್ ಪೂಲ್’ನಲ್ಲಿ ಇನ್ನೋರ್ವ ಐಏಎಸ್ ಅಧಿಕಾರಿ ಮೃತದೇಹ ಪತ್ತೆ

ಮೃತಪಟ್ಟಿರುವ ಅಧಿಕಾರಿ ಜಮ್ಮು& ಕಾಶ್ಮೀರ ಕೇಡರ್ ಆಶಿಶ್ ದಹಿಯಾ (30) ಎಂದು ಗುರುತಿಸಲಾಗಿದೆ.  ಮೂಲತ: ಹರ್ಯಾಣದವರಾಗಿರುವ ಆಶಿಶ್,  ವಿದೇಶಾಂಗ ಸೇವೆಯ ತರಬೇತಿ ಪಡೆಯುತ್ತಿದ್ದರು ಎಂದು ಹೇಳಲಾಗಿದೆ.

IAS officer found dead inside swimming pool
  • Facebook
  • Twitter
  • Whatsapp

ನವದೆಹಲಿ: ದಕ್ಷಿಣ ದೆಹಲಿಯ ವಸಂತ್ ವಿಹಾರದಲ್ಲಿರುವ ಸಂಸ್ಥೆಯೊಂದರ ಸ್ವಿಮ್ಮಿಂಗ್ ಪೂಲ್’ನಲ್ಲಿ ಯುವ ಐಏಎಸ್ ಅಧಿಕಾರಿಯ ಮೃತದೇಹ ಪತ್ತೆಯಾಗಿದೆ. 

ಮೃತಪಟ್ಟಿರುವ ಅಧಿಕಾರಿ ಜಮ್ಮು& ಕಾಶ್ಮೀರ ಕೇಡರ್ ಆಶಿಶ್ ದಹಿಯಾ (30) ಎಂದು ಗುರುತಿಸಲಾಗಿದೆ.  ಮೂಲತ: ಹರ್ಯಾಣದವರಾಗಿರುವ ಆಶಿಶ್,  ವಿದೇಶಾಂಗ ಸೇವೆಯ ತರಬೇತಿ ಪಡೆಯುತ್ತಿದ್ದರು ಎಂದು ಹೇಳಲಾಗಿದೆ.

IAS officer found dead inside swimming pool

ಫಾರಿನ್ ಕ್ಲಬ್ ಇನ್ಸ್ಟಿಟ್ಯೂಟ್’ನ ಈಜುಕೊಳದಲ್ಲಿ ಮುಳುಗಿದ್ದ ವ್ಯಕ್ತಿಯೊರ್ವನನ್ನು ಆಸ್ಪತ್ರೆಗೆ ಕೊಂಡೊಯ್ದ ಬಗ್ಗೆ ಪೊಲೀಸರಿಗೆ ಮಂಗಳವಾರ ಬೆಳಗ್ಗೆ ಮಾಹಿತಿ ಸಿಕ್ಕಿತ್ತು ಎನ್ನಲಾಗಿದೆ. ಆಶಿಶ್ ತನ್ನ ಮಿತ್ರರೊಂದಿಗೆ ಸ್ನೇಹ-ಕೂಟವೊಂದರಲ್ಲಿ ಪಾಲ್ಗೊಂಡಿದ್ದರು ಎನ್ನಲಾಗಿದೆ.  ಪೊಲೀಸರು ಪ್ರಕರಣ ದಾಖಲಿಸಿ ತನಿಖೆಯನ್ನು ಆರಂಭಿಸಿದ್ದಾರೆ.

Follow Us:
Download App:
  • android
  • ios