ಯುವ ಐಎಎಸ್ ಅಧಿಕಾರಿಯೋರ್ವರು ಇದೀಗ ಎಲ್ಲರಿಗೂ ಕೂಡ ಮಾದರಿಯಾಗಿದ್ದಾರೆ. ಕೇರಳದಲ್ಲಿ ಭಾರೀ ಮಳೆ ಸುರಿಯುತ್ತಿದ್ದು ಇಲ್ಲಿನ ನಿರಾಶ್ರಿತ ಶಿಬಿರಗಳಿಗೆ ಸ್ವತಃ ಅಕ್ಕಿ ಮೂಟೆಗಳನ್ನು ತಾವೇ ಹೊತ್ತು ಹಾಕಿದ್ದಾರೆ.
ವಯನಾಡು : ಕೇರಳದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದು, ಜನರ ರಕ್ಷಣೆಗೆ ನಿರಾಶ್ರಿತರ ಶಿಬಿರಗಳನ್ನು ತೆರೆಯಲಾಗಿದೆ. ಅನೇಕರು ಶಿಬಿರಗಳಲ್ಲಿ ಆಶ್ರಯ ಪಡೆದುಕೊಂಡಿದ್ದು, ಇಲ್ಲಿಗೆ ವಿವಿಧ ರೀತಿಯ ಆಹಾರ ಸಾಮಾಗ್ರಿಗಳನ್ನು ಪೂರೈಕೆ ಮಾಡಲಾಗುತ್ತಿದೆ.
ವಿವಿಧ ಅಧಿಕಾರಿಗಳು ರಕ್ಷಣಾ ಕಾರ್ಯದಲ್ಲಿ ಪಾಲ್ಗೊಂಡಿದ್ದು ಇದೇ ವೇಳೆ ಐಎಎಸ್ ಅಧಿಕಾರಿಯೋರ್ವರು ಇದೀಗ ಎಲ್ಲರಿಗೂ ಕೂಡ ಮಾದರಿಯಾಗಿದ್ದಾರೆ.
ಇಲ್ಲಿನ ರಿಲೀಫ್ ಕ್ಯಾಂಪ್ ಗಳಿಗೆ ಆಹಾರ ಸಾಮಾಗ್ರಿಗಳ ಪೂರೈಕೆ ಮಾಡುವ ವೇಳೆ ಸ್ವತಃ ಐಎಎಸ್ ಅಧಿಕಾರಿಯಾದ ಜಿ. ರಾಜಾಮಾಣಿಕ್ಯಮ್ ಮತ್ತು ಸಬ್ ಕಲೆಕ್ಟರ್ ಉಮೇಶ್ ಅವರು ಎಲ್ಲರಿಗೂ ಮಾದರಿಯಾಗುವಂತಹ ಕಾರ್ಯಗಳನ್ನು ಮಾಡಿದ್ದಾರೆ.
ಸ್ವತಃ ತಾವೇ ವಾಹನಗಳಿಂದ ಅಕ್ಕಿಯ ಮೂಟೆಗಳನ್ನು ಅನ್ ಲೋಡ್ ಮಾಡುವ ಕೆಲಸವನ್ನು ಮಾಡಿದ್ದಾರೆ. ಈ ಮೂಲಕ ಎಲ್ಲರಿಗೂ ಕೂಡ ಮಾದರಿಯಾಗಿದ್ದಾರೆ. ಅವರ ಈ ಕೆಲಸ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಕೇರಳ ಹಾಗೂ ಕರ್ನಾಟಕದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದು, ಹಲವೆಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.
ಕೇರಳ ಪ್ರವಾಹದಿಂದ ಸಮಸ್ತವನ್ನೂ ಕಳೆದುಕೊಂಡ ಸಂತ್ರಸ್ತರಿಗೆ ಏಷ್ಯಾನೆಟ್ ನ್ಯೂಸ್ ಚಾರಿಟೇಬಲ್ ಸಂಸ್ಥೆಯೊಂದನ್ನು ಆರಂಭಿಸಿದ್ದು, ಜನರು ಉದಾರವಾಗಿ ದನ ಸಹಾಯ ಮಾಡಬಹುದು. ತಿರುವನಂತಪುರಮ್ನ ಕಾರ್ಪೋರೇಷನ್ ಬ್ಯಾಂಕ್ಗೆ ಹಣ ವರ್ಗಾವಣೆ ಮಾಡಬಹುದಾಗಿದ್ದು, ಇಲ್ಲಿದೆ ಡೀಟೈಲ್ಸ್...
Asianet News Charitable Trust
510331001274314
Corporation Bank Thiruvananthapuram Main Branch
IFSC CORP0000070Ad4
