Asianet Suvarna News Asianet Suvarna News

IAS ಅಧಿಕಾರಿಯ ಮ್ಯಾಜಿಕ್!: 6 ತಿಂಗಳಲ್ಲಿ 13 ಲಕ್ಷ ಟನ್ ಕಸ ಖಾಲಿ! ಮಾಡಿದ್ದೇನು?

ಇಲ್ಲೊಬ್ಬ IAS ಅಧಿಕಾರಿಯೊಬ್ಬರು 13 ಲಕ್ಷ ಟನ್ ಕಸದಿಂದ ತುಂಬಿದ್ದ ಸುಮಾರು 100 ಎಕರೆ ಪ್ರದೇಶವನ್ನು ಕೇವಲ ಆರೇ ತಿಂಗಳಲ್ಲಿ ಕಸ ಮುಕ್ತ ಪ್ರದೆಶವನ್ನಾಗಿಸಿದ್ದಾರೆ. ಅಷ್ಟಕ್ಕೂ ಅವರೇನು ಮಾಡಿದ್ದು? ಆ 100 ಎಕರೆ ಜಮೀನಿನಲ್ಲಿ ಈಗ ಏನು ಮಾಡಿದ್ದಾರೆ? ಇಲ್ಲಿದೆ ಇಂಟರೆಸ್ಟಿಂಗ್ ವಿಚಾರ. ಕಸದ ಸಮಸ್ಯೆ ಅನುಭವಿಸುತ್ತಿರುವ ಬೆಂಗಳೂರು ಈ ಸ್ಟೋರಿ ಓದಲೇಬೇಕು!

ias officer asheesh singh cleared 13 lakh tonnes of garbage
Author
Indore, First Published Feb 3, 2019, 1:15 PM IST

ಇಂದೋರ್[ಫೆ.03]: 2018ರ ಅತ್ಯಂತ ಸ್ವಚ್ಛ ನಗರ ಪ್ರಶಸ್ತಿ ಇಂದೋರ್ ಪಾಲಾಗಿದೆ. ಇಲ್ಲಿನ ನಗರಿಕರು ಸ್ವಚ್ಛತೆಯ ವಿಚಾರದಲ್ಲಿ ಉಳಿದೆಲ್ಲರಿಗಿಂತಲೂ ಮುಂಚೂಣಿಯಲ್ಲಿದ್ದಾರೆ. ಹೀಗಾಗಿಯೇ ಸತತ ಎರಡನೇ ಬಾರಿ ಇಂದೋರ್ ಸ್ವಚ್ಛ ನಗರ ಎಂಬ ಹೆಮ್ಮೆ ತನ್ನದಾಗಿಸಿಕೊಂಡಿದೆ. ಇಂದೋರ್ ನಿವಾಸಿಗರು ತಮ್ಮ ನಗರವನ್ನು ಸ್ವಚ್ಛವಾಗಿಡಲು ಬಹಳಷ್ಟು ಶ್ರಮ ವಹಿಸುತ್ತಾರೆ. ಹೀಗಿರುವಾಗ ಇಲ್ಲಿನ IAS ಅಧಿಕಾರಿ ಆಶೀಷ್ ಸಿಂಗ್ ತೆಗೆದುಕೊಂಡ ಕ್ರಮವನ್ನು ಜನರು ಹಾಡಿ ಹೊಗಳುತ್ತಿದ್ದಾರೆ. ಕೇವಲ 6 ತಿಂಗಳಲ್ಲೇ ಕಸದ ಗುಡ್ಡವನ್ನು ಸಿಟಿ ಫಾರೆಸ್ಟ್ ಆಗಿ ಮಾರ್ಪಾಡು ಮಾಡಿದ್ದಲ್ಲದೇ, 13 ಟನ್ ಕಸವನ್ನು ಮಾಯ ಮಾಡಿದ್ದಾರೆ. ಹಾಗಾದ್ರೆ ಇಷ್ಟು ಪ್ರಮಾಣದ ಕಸ ಎಲ್ಲಿ ಹೋಯ್ತು? ಅಧಿಕಾರಿ ತೆಗೆದುಕೊಂಡ ಕ್ರಮವೇನು? ಇಲ್ಲಿದೆ ವಿವರ.

IAS ಅಧಿಕಾರಿ ಆಶೀಷ್ ಸಿಂಗ್ ಮೊಟ್ಟ ಮೊದಲು ಹಸಿ ಕಸ ಮತ್ತು ಒಣ ಕಸವನ್ನು ಮಷೀನ್ ಮೂಲಕ ಬೇರ್ಪಡಿಸಿದ್ದಾರೆ. ವರದಿಗಳ ಅನ್ವಯ ಅವರು ಇಲ್ಲಿ ಶೇಖರಿಸಿದ್ದ ಒಣ ಕಸವನ್ನು ಡೀಲರ್‌ಗಳಿಗೆ ಮಾರಿದ್ದಾರೆ ಹಾಗೂ ಪ್ಲಾಸ್ಟಿಕ್‌ನ್ನು ಇಂಧನವನ್ನಾಗಿ ಮಾರ್ಪಾಡು ಮಾಡಿದ್ದಾರೆ. ಪಾಲಿಥಿನ್‌ನ್ನು ಸಿಮೆಂಟ್ ಪ್ಲಾಂಟ್ಸ್ ಹಾಗೂ ರಸ್ತೆ ನಿರ್ಮಾಣ ಕಾರ್ಯಗಳಿಗೆ ಕಂಪೆನಿಗಳಿಗೆ ಮಾರಾಟ ಮಾಡಿದ್ದಾರೆ. ಇನ್ನು ಉಪಯೋಗಕ್ಕಾಗದೆ ಬಿದ್ದಿದ್ದ ರಬ್ಬರ್ ತುಂಡುಗಳನ್ನು ಕಟ್ಟಡ ನಿರ್ಮಾ ಕಾರ್ಯದಲ್ಲಿ ಬಳಕೆ ಮಾಡಿದ್ದಾರೆ.

ಇಲ್ಲಿ ಕಸ ಹೊರಗುತ್ತಿಗೆಗಾಗಿ ಸುಮಾರು ವೆಚ್ಚ 65 ಕೋಟಿ ರೂಪಾಯಿ ವೆಚ್ಚವಾಗುತ್ತಿತ್ತು. ಆದರೆ ಕಸಕ್ಕಾಗಿ 65 ಕೋಟಿ ರೂಪಾಯಿ ವ್ಯಯಿಸುವುದು ಆಶೀಷ್ ಅವರಿಗೆ ಅಸಾಧ್ಯದ ಮಾತಾಗಿತ್ತು. ಹೀಗಿರುವಾಗ ಅವರು ಇದೇ ಕಸವನ್ನು ಕೆಲಸ ಕಾರ್ಯಗಳಲ್ಲಿ ಬಳಸಲು ಯೋಚಿಸಿದರು. ಈ ಅಧಿಕಾರಿ ಈ ಕ್ರಮ ಕೈಗೊಂಡು ಕೇವಲ ಹಣವನ್ನು ಉಳಿಸಿದ್ದು ಮಾತ್ರವಲ್ಲದೇ ಕಸದ ಗುಡ್ಡವಾಗಿ ಮಾರ್ಪಾಡಾಗಿದ್ದ ಪ್ರದೇಶವನ್ನೂ ಸ್ವಚ್ಛವಾಗುವಂತೆ ಮಾಡಿದ್ದಾರೆ. ಕಸದ ಗುಡ್ಡ ಖಾಲಿಯಾಗಿದ್ದರಿಂದ ನಗರಕ್ಕೆ 100 ಎಕರೆ ಜಮೀನು ಸಿಕ್ಕಿದೆ. ಈಗಾಗಲೇ 10 ಎಕರೆ ಪ್ರದೇಶದಲ್ಲಿ ಗಾರ್ಡನ್ ಹಾಗೂ ಉಳಿದ 90 ಎಕರೆ ಪ್ರದೇಶದಲ್ಲಿ ಸಿಟಿ ಫಾರೆಸ್ಟ್[ಚಿಕ್ಕ ಅರಣ್ಯ] ನಿರ್ಮಾಣ ಮಾಡಿದ್ದಾರೆ.
ias officer asheesh singh cleared 13 lakh tonnes of garbage
ಕಸದಿಂದ ಸುತ್ತಮುತ್ತಲಿನ ಜನರೂ ಸಮಸ್ಯೆ ಅನುಭವಿಸುತ್ತಿದ್ದರು. ಉಸಿರಾಡಲೂ ತೊಂದರೆಯಾಗುತ್ತಿತ್ತು. ಆದರೀಗ IAS ಅಧಿಕಾರಿ ಈ ಸಮಸ್ಯೆಯನ್ನು ಪರಿಹರಿಸಿದ್ದಾರೆ ಹಾಗೂ ಕಸದಿಂದ ತುಂಬಿದ್ದ ಪ್ರದೇಶವನ್ನು ಹಚ್ಚ ಹಸಿರಿನಿಂದ ಕಂಗೊಳಿಸುವಂತೆ ಮಾಡಿದ್ದಾರೆ.

Follow Us:
Download App:
  • android
  • ios