ಇದು ಐಎಎಸ್ ಟಾಪರ್'ಗಳ ಪ್ರೇಮಕತೆ : 2ನೇ ರ‌್ಯಾಂಕ್ ವರನನ್ನು ವರಿಸಿದ ಮೊದಲ ಶ್ರೇಣಿ ವಧು

news | Monday, April 9th, 2018
Suvarna Web Desk
Highlights

ಪ್ರೇಮ ನಿವೇದನೆ ಮಾಡಿದ್ದು 2ನೇ ರ‌್ಯಾಂಕ್ ಪಡೆದ ಅತರ್ ಅಮೀರ್ ಉಲ್ ಶಫಿ. ಪ್ರೀತಿಯ ಬಲೆಗೆ ಬಿದ್ದಿದ್ದು ಮೊದಲ ಟಾಪರ್ ಟಿನಾ ದಬಿ. ಇವರಿಬ್ಬರು 2015ರ ಐಎಎಸ್ ಟಾಪರ್'ಗಳು. ಇವರಿಬ್ಬರ ಜೋಡಿ ಜಮ್ಮು ಮತ್ತು ಕಾಶ್ಮೀರದಲ್ಲಿ ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ.

ನವದೆಹಲಿ(ಏ.09): ಪ್ರೇಮಕತೆ ಎಲ್ಲಿ ಅರಳುವುದಿಲ್ಲ ಹೇಳಿ, ಪುಟ್ಟ ಗುಡಿಸಲುನಿಂದ ಇಡಿದು ಅರಮನೆಗಳಲ್ಲೂ ನೂರಾರು ಕತೆಗಳಿರುತ್ತವೆ. ಒಂದೊಂದು ಸ್ಟೋರಿ ಒಂದೊಂದು ರೀತಿಯಲ್ಲಿ ವಿಭಿನ್ನವಾಗಿರುತ್ತವೆ.

ಈ ಪ್ರೇಮಕತೆ ಅರಳಿದ್ದು ದೆಹಲಿಯ ಐಎಎಸ್ ತರಬೇತಿ ಇಲಾಖೆಯಲ್ಲಿ. ಪ್ರೇಮ ನಿವೇದನೆ ಮಾಡಿದ್ದು 2ನೇ ರ‌್ಯಾಂಕ್ ಪಡೆದ ಅತರ್ ಅಮೀರ್ ಉಲ್ ಶಫಿ. ಪ್ರೀತಿಯ ಬಲೆಗೆ ಬಿದ್ದಿದ್ದು ಮೊದಲ ಟಾಪರ್ ಟಿನಾ ದಬಿ. ಇವರಿಬ್ಬರು 2015ರ ಐಎಎಸ್ ಟಾಪರ್'ಗಳು. ಇವರಿಬ್ಬರ ಜೋಡಿ ಜಮ್ಮು ಮತ್ತು ಕಾಶ್ಮೀರದಲ್ಲಿ ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ.

ಟೀನಾ ದೆಹಲಿ ಮೂಲದವರಾದರೆ, ಶಫಿ ಕಾಶ್ಮೀರದವರು. ಟಾಪರ್'ಗಳಾಗಿ 2016ರಲ್ಲಿ ದೆಹಲಿಯಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ಪ್ರೇನಾನುಬಂಧ ಶುರುವಾಗಿದೆ.ಇವರಿಬ್ಬರು ಅನ್ಯ ಧರ್ಮದವರಾದ ಕಾರಣ ಕೆಲವು ಧರ್ಮ ಮುಖಂಡರು ಪ್ರತಿಭಟನೆ ನಡೆಸಿದರು. ಟಿನಾ ಹರ್ಯಾಣ ರಾಜ್ಯವನ್ನು ಕೇಡರ್ ಆಗಿ ಆಯ್ಕೆ ಮಾಡಿಕೊಂಡರೆ ಶಫಿ ಜಮ್ಮು ಕಾಶ್ಮೀರವನ್ನು ಆರಿಸಿಕೊಂಡಿದ್ದಾರೆ.       

Comments 0
Add Comment

    Fake IAS Officer Arrested

    video | Friday, March 30th, 2018