50 ವರ್ಷಗಳ ಹಿಂದೆ ಮೃತಪಟ್ಟಿದ್ದ ಯೋಧನ ಮೃತದೇಹ ಪತ್ತೆ1968 ರಲ್ಲಿ ಅಪಘಾತಕ್ಕೀಡಾಗಿದ್ದ ಭಾರತೀಯ ವಾಯುಪಡೆ ವಿಮಾನಭಾರತೀಯ ವಾಯುಪಡೆಯ AN-12 ವಿಮಾನಹೆಪ್ಪುಗಟ್ಟಿದ ಸ್ಥಿತಿಯಲ್ಲಿ ಪತ್ತೆಯಾದ ಯೋಧನ ಮೃತದೇಹ

ಶಿಮ್ಲಾ(ಜು.21): ಸುಮಾರು 50 ವರ್ಷಗಳ ಹಿಂದೆ ಭಾರತೀಯ ವಾಯುಪಡೆಯ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದ ಯೋಧನ ಮೃತದೇಹ ಹೆಪ್ಪುಗಟ್ಟಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಹಿಮಾಚಲ ಪ್ರದೇಶದ ಢಾಕಾ ಗ್ಲೇಷಿಯರ್​ ಕ್ಯಾಂಪ್​ ಬಳಿ 50 ವರ್ಷಗಳ ಹಿಂದೆ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದ ಯೋದನ ಮೃತದೇಹ ಹೆಪ್ಪುಗಟ್ಟಿದ ಸ್ಥಿತಿಯಲ್ಲಿ ದೊರೆತಿದೆ.

ಪರ್ವತಾರೋಹಿಗಳ ತಂಡವೊಂದು ಚಂದ್ರಭಾಗದ 13ನೇ ಶೃಂಗದ ಬಳಿ ಸ್ವಚ್ಛತಾ ಕಾರ್ಯಕ್ರಮ ಆಯೋಜಿಸಿದ್ದ ವೇಳೆ, ಯೋಧನ ಮೃತದೇಹ ಸಿಕ್ಕಿದೆ ಎಂದು ಹೇಳಲಾಗಿದೆ. ಇದೇ ವೇಳೆ ತಂಡಕ್ಕೆ ವಿಮಾನದ ಮತ್ತಷ್ಟು ಅವಶೇಷಗಳು ದೊರೆತಿದ್ದು, 50 ವರ್ಷಗಳ ಹಿಂದಿನ ಘಟನೆಗೆ ಮರುಜೀವ ಬಂದಂತಾಗಿದೆ.

Scroll to load tweet…

1968 ಫೆಬ್ರವರಿ 7ರಂದು ಚಂಡೀಗಢದಿಂದ ಲೇಹ್​ಗೆ 102 ಜನರನ್ನು ಹೊತ್ತೊಯ್ಯುತ್ತಿದ್ದ ಭಾರತೀಯ ವಾಯುಪಡೆಯ AN-12 ವಿಮಾನ​ ಹವಾಮಾನ ವೈಪರೀತ್ಯದ ಕಾರಣ ತನ್ನ ಸಂಪರ್ಕ ಕಳೆದುಕೊಂಡಿತ್ತು. ನಂತರ ಹಿಮಾಚಲ್​ ಪ್ರದೇಶದ ಲಹೌಲ್​ ಕಣಿವೆಯ ಬಳಿ ಅಪಘಾತವಾಗಿರುವುದು ತಿಳಿದಿತ್ತು. 2003ರಲ್ಲಿ ಅಪಘಾತವಾಗಿದ್ದ ವಿಮಾನದ ಕೆಲವು ಅವಶೇಷಗಳು ದೊರೆತಿದ್ದವು.