ಶ್ರೀನಗರ[ಮೇ.05]: ಬಾಲಾಕೋಟ್‌ ವಾಯುದಾಳಿ ನಡೆದ ಎರಡು ತಿಂಗಳ ಬಳಿಕ ಭಾರತೀಯ ವಾಯು ಪಡೆ ವಿಂಗ್‌ ಕಮಾಂಡರ್‌ ಅಭಿನಂದನ್‌ ಶನಿವಾರ ಜಮ್ಮು- ಕಾಶ್ಮೀರದ ಶ್ರೀನಗರದಲ್ಲಿ ತಮ್ಮ ಸಹೋದ್ಯೋಗಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ಈ ವೇಳೆ ಅಭಿನಂದನ್‌ ಅವರನ್ನು ಅಭಿನಂದಿಸಿದ ಸಹೋದ್ಯೋಗಿಗಳು ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು. ಈ ವಿಡಿಯೋ ತುಣುಕೀಗ ವೈರಲ್‌ ಆಗಿದೆ.

ಯಾರು ಈ ವಿಂಗ್ ಕಮಾಂಡರ್ ಅಭಿನಂದನ್?

 ಪುಲ್ವಾಮಾ ದಾಳಿ ಬಳಿಕ ಭಾರತದ ವಾಯುನೆಲೆ ಮೇಲೆ ದಾಳಿಗೆ ಬಂದಿದ್ದ ಪಾಕಿಸ್ತಾನ ಎಫ್‌-16 ಯುದ್ಧ ವಿಮಾನವೊಂದನ್ನು ಬೆನ್ನಟ್ಟಿಹೋಗಿದ್ದ ಅಭಿ, ಪಾಕ್‌ ಯೋಧರ ಕೈಗೆ ಸಿಕ್ಕಿಬಿದ್ದಿದ್ದರು. ಎರಡು ದಿನಗಳ ಕಾಲ ಅವರನ್ನು ತನ್ನ ವಶದಲ್ಲಿ ಇಟ್ಟುಕೊಂಡಿದ್ದ ಪಾಕ್‌, ಅವರಿಗೆ ಭಾರೀ ಮಾನಸಿಕ ಹಿಂಸೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಕೆಲ ಪರೀಕ್ಷೆಗೆ ಗುರಿಪಡಿಸಿದ ಬಳಿಕ ನಾಲ್ಕು ವಾರಗಳ ಅನಾರೋಗ್ಯ ರಜೆ ಮೇಲೆ ಮನೆಗೆ ಕಳುಹಿಸಲಾಗಿತ್ತು.