Asianet Suvarna News Asianet Suvarna News

ಕಾರ್ಗಿಲ್ ಯುದ್ಧದ ವೇಳೆ ಪಾಕ್ ಪ್ರಧಾನಿ ಷರೀಫ್, ಮುಷರಫ್ ಸ್ವಲ್ಪದರಲ್ಲೇ ಪಾರು!

ಉನ್ನತ ಅಧಿಕಾರಿಯೊಬ್ಬರು ನಿರ್ದೇಶನದ ಮೇರೆಗೆ, ಬಾಂಬ್ ಹಾಕುವ ನಿರ್ಧಾರ ಪೈಲಟ್ ಕೈಬಿಟ್ಟರು. ಬಳಿಕ ಬಾಂಬ್ ಅನ್ನು ಗಡಿ ನಿಯಂತ್ರಣ ರೇಖೆ ಬಳಿ ಹಾಕಲಾಯಿತು ಎನ್ನಲಾಗಿದೆ.

IAF nearly bombed Nawaz Sharif Pervez Musharraf during Kargil War

ನವದೆಹಲಿ(ಜು.25): ಕಾರ್ಗಿಲ್ ಯುದ್ಧದ ಸಂದರ್ಭ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಮತ್ತು ಮಾಜಿ ಸೇನಾ ಮುಖ್ಯಸ್ಥ ಪರ್ವೇಜ್ ಮುಷರಫ್ ಸ್ವಲ್ಪದರಲ್ಲೇ ಭಾರತೀಯ ನೌಕಾ ಪಡೆಯ ದಾಳಿಯಿಂದ ಪಾರಾಗಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ.

1999, ಜೂನ್ 24ರ ಮುಂಜಾನೆ 8.45ರ ವೇಳೆ ಭಾರತೀಯ ವಾಯು ಸೇನೆಯ ಯುದ್ಧ ವಿಮಾನ ‘ಜಾಗ್ವಾರ್’ ಷರೀಫ್ ಮತ್ತು ಮುಷರಫ್ ಇದ್ದ ಗುಲೆಟಿ ಸೇನಾ ನೆಲೆಯ ಮೇಲೆ ದಾಳಿ ನಡೆಸುವ ಸಾಧ್ಯತೆಯಿತ್ತು. ಜಾಗ್ವಾರ್‌ನ ಪೈಲಟ್ ಈ ನೆಲೆಯ ಮೇಲೆ ಬಾಂಬ್ ಹಾಕುವುದರಲ್ಲಿದ್ದರು. ಆದರೆ ಷರೀಫ್ ಮತ್ತು ಮುಷರಫ್ ಇದ್ದುದರಿಂದ ಸೇನಾ ನೆಲೆಯ ಮೇಲೆ ದಾಳಿ ನಡೆಸದಿರಲು ನಿರ್ಧರಿಸಿದ್ದರು ಎಂಬ ಮಾಹಿತಿಯುಳ್ಳ ದಾಖಲೆಯೊಂದರಿಂದ ಬಹಿರಂಗವಾಗಿದೆ.

ಉನ್ನತ ಅಧಿಕಾರಿಯೊಬ್ಬರು ನಿರ್ದೇಶನದ ಮೇರೆಗೆ, ಬಾಂಬ್ ಹಾಕುವ ನಿರ್ಧಾರ ಪೈಲಟ್ ಕೈಬಿಟ್ಟರು. ಬಳಿಕ ಆ ಬಾಂಬ್ ಅನ್ನು ಗಡಿ ನಿಯಂತ್ರಣ ರೇಖೆ ಬಳಿ ಹಾಕಲಾಯಿತು ಎನ್ನಲಾಗಿದೆ. ಕಾರ್ಗಿಲ್ ಯುದ್ಧದ ವೇಳೆ ಗುಲೆಟಿ, ಪಾಕಿಸ್ತಾನಿ ಯೋಧರಿಗೆ ಲಾಜಿಸ್ಟಿಕ್ ಬೆಂಬಲ ಒದಗಿಸುವ ಮತ್ತು ಆಡಳಿತಾತ್ಮಕ ನೆಲೆಯಾಗಿತ್ತು. ಷರೀಫ್ ಮತ್ತು ಮುಷರಫ್ ಮೊದಲ ಬಾರಿ ಅಲ್ಲಿಗೆ ಆಗಮಿಸಿದ್ದರು.

Follow Us:
Download App:
  • android
  • ios