ಗುಹವಾಟಿ(ಜೂ. 03) ಅಸ್ಸಾಂ ನ ಜೊರತ್ ಏರ್ ಬೇಸ್ ನಿಂದ ಟೇಕ್ ಆಫ್ ಆಗಿದ್ದ ಭಾರತೀಯ ವಾಯುಸೇನೆಗೆ ಸೇರಿದ ವಿಮಾನ ಮಿಸ್ ಆಗಿದೆ ಎಂಬ ವರದಿಗಳು ಬಂದಿವೆ.

13 ಜನರನ್ನು ಹೊತ್ತ ವಿಮಾನ ಮಧ್ಯಾಹ್ನ 12.25ಕ್ಕೆ ಟೇಕ್ ಆಫ್ ಆಗಿತ್ತು. ಅರುಣಾಚಲ ಪ್ರದೇಶದ ಮೆಂಚುಕಾ ಏರ್ ಫೀಲ್ಡ್ ನಲ್ಲಿಲ್ಯಾಂಡ್ ಆಗಬೇಕಾಗಿತ್ತು.

ಆದರೆ ಏರ್ ಕ್ರಾಫ್ಟ್ ಅರುಣಾಚಲ ಪ್ರದೇಶ ತಲುಪಿಲ್ಲ. ಎಂಟು ಜನ ಸಿಬ್ಬಂದಿ ಮತ್ತು ಐವರು ಪ್ರಯಾಣಿಕರು ವಿಮಾನದಲ್ಲಿದ್ದರು. ವಿಮಾನ ಪತ್ತೆಗೆ ಎಲ್ಲ ಮೂಲಗಳಿಂದ ಪ್ರಯತ್ನ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.