ಅಸಮಧಾನ ಹೊರಹಾಕಿ ನೋವು ತೋಡಿಕೊಂಡ ಖರ್ಗೆ

I Won 11 Time But Not Get CM Post : Mallikarjun Kharge Un Happy
Highlights

ಸಚಿವ ಸ್ಥಾನ ಸಿಗಲಿಲ್ಲ ಅನ್ನೋ ನೋವು ಎಲ್ರಿಗೂ ಇರುತ್ತೆ. ಹಾಗಂತ ಎಲ್ರಿಗೂ ಸಚಿವ ಸ್ಥಾನ ಕೊಡಕ್ಕಾಗಲ್ಲ. ಹನ್ನೊಂದು ಎಲೆಕ್ಷನ್ ನಿಂತೂ ಗೆದ್ದಿ ದ್ದೀನಿ. ನನಗೆಷ್ಟು ನೋವಾಗಿರಬಾರದು ಹೇಳಿ - ಮುಖ್ಯಮಂತ್ರಿ ಸ್ಥಾನದಿಂದ ವಂಚಿತವಾಗಿರುವುದಕ್ಕೆ ಆಗಿರುವ ನೋವನ್ನು ಕಾಂಗ್ರೆಸ್ ಹಿರಿಯ ಮುಖಂಡ, ಲೋಕಸಭಾ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಪರೋಕ್ಷವಾಗಿ ತೋಡಿಕೊಂಡದ್ದು ಹೀಗೆ. 

ಬೆಂಗಳೂರು :  ಸಚಿವ ಸ್ಥಾನ ಸಿಗಲಿಲ್ಲ ಅನ್ನೋ ನೋವು ಎಲ್ರಿಗೂ ಇರುತ್ತೆ. ಹಾಗಂತ ಎಲ್ರಿಗೂ ಸಚಿವ ಸ್ಥಾನ ಕೊಡಕ್ಕಾಗಲ್ಲ. ಹನ್ನೊಂದು ಎಲೆಕ್ಷನ್ ನಿಂತೂ ಗೆದ್ದಿ ದ್ದೀನಿ. ನನಗೆಷ್ಟು ನೋವಾಗಿರಬಾರದು ಹೇಳಿ - ಮುಖ್ಯಮಂತ್ರಿ ಸ್ಥಾನದಿಂದ ವಂಚಿತವಾಗಿರುವುದಕ್ಕೆ ಆಗಿರುವ ನೋವನ್ನು ಕಾಂಗ್ರೆಸ್ ಹಿರಿಯ ಮುಖಂಡ, ಲೋಕಸಭಾ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಪರೋಕ್ಷವಾಗಿ ತೋಡಿಕೊಂಡದ್ದು ಹೀಗೆ. 

ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಚಿವ ರಾಜಶೇಖರ ಪಾಟೀಲ್ ಅಭಿನಂದನಾ ಸಮಾರಂಭದಲ್ಲಿ ಸಚಿವ ಸ್ಥಾನ ವಂಚಿತರಾಗಿ ಮುನಿಸಿಕೊಂಡಿರುವ ಶಾಸಕರಿಗೆ ಕಿವಿ ಮಾತು ಹೇಳುವ ಭರದಲ್ಲಿ ತಮಗಾದ ನೋವು ಬಹಿರಂಗಪಡಿಸಿದರು. 

ಎಲ್ರಿಗೂ ಸಚಿವ ಸ್ಥಾನ ಕೊಡಕ್ಕಾಗಲ್ಲ: ಸಚಿವ ಸ್ಥಾನ ಸಿಗಲಿಲ್ಲ ಅನ್ನೊ ನೋವು ಎಲ್ರಿಗೂ ಇರುತ್ತೆ. ಹಾಗಂತ ಎಲ್ರಿಗೂ ಸಚಿವ ಸ್ಥಾನ ಕೊಡಕ್ಕಾಗಲ್ಲ. ಹನ್ನೊಂದು  ಎಲೆಕ್ಷನ್ ನಿಂತು ಗೆದ್ದಿದ್ದೀನಿ. ನನಗೆಷ್ಟು ನೋವಾಗಿರಬಾರದು ಹೇಳಿ ಎನ್ನುವ ಮೂಲಕ ರಾಜ್ಯವನ್ನಾಳುವ ಮನದಾಳದ ಮಾತನ್ನು ಸೂಕ್ಷ್ಮವಾಗಿ ತಿಳಿಸಿದ ಖರ್ಗೆ, ರಾಜ್ಯದ ಸಚಿವ ಸಂಪುಟ ರಚನೆ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿನ ಹಿರಿ ಕಿರಿಯರು, ಅಷ್ಟೇ ಏಕೆ ಜಿಲ್ಲೆಯಲ್ಲಿನ ಕಾಂಗ್ರೆಸ್ ಶಾಸಕರು ಮುನಿದುಕೊಂಡ ಎಲ್ಲರನ್ನೂ ಸಚಿವ ರನ್ನಾಗಿಸಲು ಸಾಧ್ಯವಿಲ್ಲ. ಪಕ್ಷದ ಶಿಸ್ತಿಗೆ ತಲೆಬಾಗುವಂತೆ ಸಲಹೆ ನೀಡಿದರು.

ಇನ್ನೊಂದು ಎಲೆಕ್ಷನ್ ಎದುರಿಸ್ತೀನಿ: ಮುಂದಿನ ಲೋಕ ಸಭೆಯಲ್ಲಿ ನಾವೇ ಗೆಲ್ತೀವಿ, ಹನ್ನೊಂದು ಎಲೆಕ್ಷನ್ ಗೆದ್ದಿನಿ, ಇನ್ನೊಂದು ಇಲೆಕ್ಷನ್ ಎದುರಿಸ್ತೀನಿ ಎಂದು ಹೇಳುವ ಮೂಲಕ ಮಲ್ಲಿಕಾರ್ಜುನ್ ಖರ್ಗೆ ಅವರು ಡಜನ್ ಗೆಲುವಿನ ಗುರಿಯನ್ನು ಸ್ಪಷ್ಟಪಡಿಸಿದರು. ಜನರ ಕೆಲಸ ನಿಷ್ಠೆಯಿಂದ ಮಾಡಿದ್ರೆ ಜನರ ಆಶಿರ್ವಾದ ಸುಲಭ, ನಾನು ಇನ್ನೊಂದು ಎಲೆಕ್ಷನ್ ಟ್ರೈ ಮಾಡ್ತಿನಿ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರದ ಗದ್ದುಗೆ ಹಿಡಿಯಲಿದೆ ಎಂದು ಹೇಳುತ್ತಿದ್ದಂತೆ ನೆರೆದಿದ್ದ ಜನಸ್ತೋಮದ ಚಪ್ಪಾಳೆ ಮುಗಿಲು ಮುಟ್ಟಿತು.

loader