ಸೆ.5ಕ್ಕೆ ಇಲ್ಲಿನ ಹಟ್ಟಾ ಜಿಲ್ಲೆಯಲ್ಲಿ ನಿಗದಿಯಾಗಿರುವ ಕಾಂಗ್ರೆಸ್ ರ‍್ಯಾಲಿಗೆ ಸಿಂಧಿಯಾ ಅವರು ತೆರಳಬೇಕಿರುವ ಬೆನ್ನಲ್ಲೇ, ಬಿಜೆಪಿ ಶಾಸಕಿ ಉಮಾದೇವಿ ಖಟಿಕ್ ಅವರ ಪುತ್ರ ಈ ಧಮ್ಕಿ ಹಾಕಿದ್ದಾನೆ.
ಭೋಪಾಲ್[ಸೆ.04]: ಮಧ್ಯಪ್ರದೇಶದ ಕಾಂಗ್ರೆಸ್ ಸಂಸದ ಜ್ಯೋತಿರಾದಿತ್ಯ ಸಿಂಧಿಯಾರನ್ನು ಬಿಜೆಪಿ ಶಾಸಕಿಯ ಪುತ್ರನೋರ್ವ ಗುಂಡಿಟ್ಟು ಹತ್ಯೆಗೈಯ್ಯುವುದಾಗಿ ಬೆದರಿಕೆಯೊಡ್ಡಿದ್ದಾನೆ.
ಸೆ.5ಕ್ಕೆ ಇಲ್ಲಿನ ಹಟ್ಟಾ ಜಿಲ್ಲೆಯಲ್ಲಿ ನಿಗದಿಯಾಗಿರುವ ಕಾಂಗ್ರೆಸ್ ರ‍್ಯಾಲಿಗೆ ಸಿಂಧಿಯಾ ಅವರು ತೆರಳಬೇಕಿರುವ ಬೆನ್ನಲ್ಲೇ, ಬಿಜೆಪಿ ಶಾಸಕಿ ಉಮಾದೇವಿ ಖಟಿಕ್ ಅವರ ಪುತ್ರ ಈ ಧಮ್ಕಿ ಹಾಕಿದ್ದಾನೆ. ಈ ಬಗ್ಗೆ ಶಾಸಕಿ ಪುತ್ರ ಲಾಲ್‌ಚಂದ್ ಖಟಿಕ್, ‘ಝಾನ್ಸಿಯ ರಾಣಿಯನ್ನು ಹತ್ಯೆ ಮಾಡಿದ ಜಿವಾಜಿರಾವ್ ಅವರ ಕೆಟ್ಟ ರಕ್ತ ನಿನ್ನ ಮೈಯ್ಯಲ್ಲಿದೆ. ನೀನು ಹಟ್ಟಾಕ್ಕೆ ಬಂದದ್ದೇ ಆದಲ್ಲಿ, ನಾನೇ ನಿನ್ನನ್ನು ಶೂಟ್ ಮಾಡಿ ಕೊಲ್ಲುತ್ತೇನೆ,’ ಎಂದು ಫೇಸ್‌ಬುಕ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾನೆ.
ಈ ವಿಷಯ ವಿವಾದವಾಗುತ್ತಲೇ ಪುತ್ರನ ಈ ವಿವಾದಾತ್ಮಕ ಪೋಸ್ಟ್ ಅನ್ನು ತೆಗೆದು ಹಾಕಲು ಸೂಚಿಸುವುದಾಗಿ ಶಾಸಕಿ ಉಮಾದೇವಿ ಹೇಳಿದ್ದಾರೆ.
