25 ವರ್ಷಗಳ ಹಿಂದೆ ಬಾಬ್ರಿ ಮಸೀದಿ ಧ್ವಂಸ ಮಾಡಲು ಮುಂದಾಗಿದ್ದ ಕರಸೇವಕರನ್ನು ಸಮಾಧಾನಪಡಿಸಲು ಎಲ್.ಕೆ.ಅಡ್ವಾಣಿ ಮುಂದಾಗಿದ್ದರು. ಆದರೆ, ಮಸೀದಿ ಧ್ವಂಸಗೊಳಿಸುವಂತೆ ಕರ ಸೇವಕರಿಗೆ ಉತ್ತೇಜನ ನೀಡಿದ್ದು ನಾನು ಎಂದು ವೇದಾಂತಿ ಹೇಳಿದ್ದಾರೆ. ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಅಡ್ವಾಣಿ ಅವರ ಪಾತ್ರವಿಲ್ಲ. ಮಸೀದಿಯನ್ನು ಸಂಪೂರ್ಣವಾಗಿ ನೆಲಸಮ ಮಾಡಲಾಗಿದೆಯೇ ಎಂಬುದನ್ನು ಖಾತ್ರಿ ಪಡಿಸಿಕೊಂಡದ್ದು ಸಹ ನಾನೇ’ ಎಂದು ಹೇಳಿದ್ದಾರೆ.
ಲಖನೌ(ಏ.21): ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್ ಹಿರಿಯ ನಾಯಕರಾದ ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ ಜೋಷಿ, ಕೇಂದ್ರ ಸಚಿವೆ ಉಮಾ ಭಾರತಿ ಸೇರಿ ಒಟ್ಟು 13 ಬಿಜೆಪಿ ನಾಯಕರ ವಿರುದ್ಧ ಕ್ರಿಮಿನಲ್ ಸಂಚು ಆರೋಪ ಆದೇಶ ಜಾರಿ ಮಾಡಿದೆ. ಮಸೀದಿ ಧ್ವಂಸ ಪಡಿಸುವಲ್ಲಿ ಎಲ್.ಕೆ.ಅಡ್ವಾಣಿ ಅವರ ಪಾತ್ರ ಏನೂ ಇಲ್ಲ ಎಂದು ಉತ್ತರಪ್ರದೇಶದ ಮಾಜಿ ಬಿಜೆಪಿ ಶಾಸಕ ರಾಮ್ ವಿಲಾಸ್ ವೇದಾಂತಿ ಹೇಳಿದ್ದಾರೆ.
25 ವರ್ಷಗಳ ಹಿಂದೆ ಬಾಬ್ರಿ ಮಸೀದಿ ಧ್ವಂಸ ಮಾಡಲು ಮುಂದಾಗಿದ್ದ ಕರಸೇವಕರನ್ನು ಸಮಾಧಾನಪಡಿಸಲು ಎಲ್.ಕೆ.ಅಡ್ವಾಣಿ ಮುಂದಾಗಿದ್ದರು. ಆದರೆ, ಮಸೀದಿ ಧ್ವಂಸಗೊಳಿಸುವಂತೆ ಕರ ಸೇವಕರಿಗೆ ಉತ್ತೇಜನ ನೀಡಿದ್ದು ನಾನು ಎಂದು ವೇದಾಂತಿ ಹೇಳಿದ್ದಾರೆ. ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಅಡ್ವಾಣಿ ಅವರ ಪಾತ್ರವಿಲ್ಲ. ಮಸೀದಿಯನ್ನು ಸಂಪೂರ್ಣವಾಗಿ ನೆಲಸಮ ಮಾಡಲಾಗಿದೆಯೇ ಎಂಬುದನ್ನು ಖಾತ್ರಿ ಪಡಿಸಿಕೊಂಡದ್ದು ಸಹ ನಾನೇ’ ಎಂದು ಹೇಳಿದ್ದಾರೆ.
1992ರ ಡಿ.6ರಂದು ಬಾಬ್ರಿ ಮಸೀದಿ ಕೆಡವಲು ಅಡ್ವಾಣಿ ಅಥವಾ ಇತರೆ ಬಿಜೆಪಿ ನಾಯಕರ‌್ಯಾರು ಕರಸೇವಕರಿಗೆ ಉತ್ತೇಜನ ನೀಡಲಿಲ್ಲ. ಆದರೆ, ಆ ಕೆಲಸವನ್ನು ಅಶೋಕ್ ಸಿಂಘಲ್, ಗೋರಖ್‌ಪುರ ದೇವಸ್ಥಾನದ ಮೊಹಂತ ಅವೈದ್ಯನಾಥ್ ಮತ್ತು ನಾನು ವಿಶ್ವ ಹಿಂದೂ ಪರಿಷತ್‌ನ ಕಾರ್ಯಕರ್ತರಿಗೆ ಉತ್ತೇಜನ ನೀಡುವ ಮೂಲಕ ಮಸೀದಿ ನೆಲಸಮವಾಗುವಂತೆ ಮಾಡಿದ್ದೆವು ಎಂದು ಹೇಳಿದ್ದಾರೆ.