ಗಂಗಾವತಿ[ಅ.06]: ನಮೋ ಬ್ರಿಗೇಡ್‌ನ ಚಕ್ರವರ್ತಿ ಸೂಲಿಬೆಲೆ ಬಗ್ಗೆ ದೇಶದ್ರೋಹಿ ಎಂದು ನಾನು ಮಾತನಾಡಿಲ್ಲ. ಒಂದು ವೇಳೆ ಸೂಲಿಬೆಲೆ ಅವರ ಮನಸ್ಸಿಗೆ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಕೇಂದ್ರ ಸಚಿವ ಸದಾನಂದಗೌಡ ಹೇಳಿದ್ದಾರೆ.

ಏನ್ರೀ ಅದು ಗಲಾಟೆ: ಶಾ ಕೈಯಲ್ಲಿರುವ ವರದಿಯಲ್ಲಿದೆ ಚಕ್ರವರ್ತಿ, ಗೌಡರ ಭರಾಟೆ!

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ 25 ಸಂಸದರು ಇದ್ದರೂ ಪರಿಹಾರ ತರುವಲ್ಲಿ ವಿಫಲರಾಗಿದ್ದಾರೆ ಎಂಬ ಹೇಳಿಕೆಯಿಂದ ಮನಸ್ಸಿಗೆ ನೋವಾಗಿತ್ತು. ಪ್ರಧಾನಿ ವಿರುದ್ಧ ಮಾತನಾಡಿರುವುದು ದೊಡ್ಡ ದುರಂತವಾಗಿದೆ. ರಾಜ್ಯದ ಸಂಸದರು ಇಲ್ಲಿಯ ಸಮಸ್ಯೆಯನ್ನು ಅರಿತು ಕೇಂದ್ರದ ಗಮನಕ್ಕೆ ತರುತ್ತಿದ್ದಾರೆ ಎಂದರು.

ನೆರೆ ಪರಿಹಾರ ತನ್ನಿ ಎಂದಿದಕ್ಕೆ ಚಕ್ರವರ್ತಿ ವಿರುದ್ಧ ಸಿಂಹ ಘರ್ಜನೆ

ಕೇಂದ್ರ ಸರ್ಕಾರ ರಾಜ್ಯದಲ್ಲಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಪರಿಹಾರ ನೀಡಲು ವಿಳಂಬ ಮಾಡುತ್ತಿದೆ ಎಂದು ಟೀಕಿಸಿ ಹೇಳಿಕೆ ನೀಡಿರುವ ವಿಜಯಪುರ ನಗರ ಕ್ಷೇತ್ರದ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರಿಗೆ ಬಿಜೆಪಿ ವರಿಷ್ಠರೇ ತಕ್ಕ ಪಾಠ ಕಲಿಸಲಿದ್ದಾರೆ. ಪಕ್ಷದ ಹಿರಿಯ ನಾಯಕರಾಗಿ ಕೇಂದ್ರ ಸರ್ಕಾರ ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾತನಾಡುವುದು ಸರಿಯಲ್ಲ. ತಾವು ಮತ್ತು ರಾಜ್ಯದ 25 ಸಂಸದರು ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್‌ ಶಾ ಅವರನ್ನು ಭೇಟಿಯಾಗಿದ್ದರಿಂದ ರಾಜ್ಯಕ್ಕೆ .1200 ಕೋಟಿ ಮಧ್ಯಂತರ ಪರಿಹಾರ ಘೋಷಿಸಿದ್ದಾರೆ ಎಂದು ತಿಳಿಸಿದರು.

ಚಕ್ರವರ್ತಿಯನ್ನ ಬೈದ್ರೆ ಪಕ್ಷಕ್ಕೆ ಹಿನ್ನಡೆ: ಸದಾನಂದಗೌಡ್ರನ್ನ ಹಿಗ್ಗಾಮುಗ್ಗಾ ಜಾಡಿಸಿದ ಬಿಜೆಪಿ ನಾಯಕ

ಪ್ರಶ್ನೆ ಕೇಳಿದ ಸೂಲಿಬೆಲೆ, ಸುವರ್ಣ ನ್ಯೂಸ್‌ಗೆ ಗೌಡರಿಂದ ಬ್ಲಾಕ್ ಭಾಗ್ಯ, ಆದ್ರೇನಾಯ್ತು!

ನಿಮ್ಮ ಮಂತ್ರಿಗಿರಿ ಕರುನಾಡು ಜನರ ಭಿಕ್ಷೆ: ಸದಾನಂದಗೌಡ್ರಿಗೆ ಚಕ್ರವರ್ತಿ ತಿರುಗೇಟು...